13-07-2011 ನನ್ನ ಜೀವನದಲ್ಲಿ ಎಂದಿಗೂ ಮರೆಯಲಾರದ ದಿನ. ಈ ದಿನ ನನಗೆ ಜೀವನಪೂರ್ತಿ ನೆನಪಿರುತ್ತದೆ ಎಂದು ರಜನೀಕಾಂತ್ ಪುತ್ರಿ ಸೌಂದರ್ಯ ರಜನೀಕಾಂತ್ ಹೇಳಿದ್ದಾರೆ. ಈ ದಿನದ ಒಂದು ಪ್ರಮುಖ ವಿಡಿಯೋವೊಂದನ್ನು ಕೂಡಾ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ತಂದೆ ನಿಜಕ್ಕೂ ದೇವರ ಮಗ;ಆ ದಿನವನ್ನು ನೆನೆದು ಭಾವುಕರಾದ ಸೌಂದರ್ಯ ರಜನೀಕಾಂತ್ - undefined
8 ವರ್ಷಗಳ ಹಿಂದಿನ ಪ್ರಮುಖ ಘಟನೆಯೊಂದನ್ನು ನೆನೆಸಿಕೊಂಡು ಸೂಪರ್ಸ್ಟಾರ್ ರಜನೀಕಾಂತ್ ಪುತ್ರಿ ಸೌಂದರ್ಯ ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. ನನ್ನ ತಂದೆ ನಿಜಕ್ಕೂ ದೇವರ ಮಗ ಎಂದು ಹೇಳಿದ್ದಾರೆ.
ಸಿಂಗಪೂರ್ನಲ್ಲಿ ಚಿಕಿತ್ಸೆ ಮುಗಿಸಿಕೊಂಡು '2011 ರ ಜುಲೈ 13 ರ ರಾತ್ರಿ ಅಪ್ಪ ಮತ್ತೆ ಚೆನ್ನೈಗೆ ವಾಪಸ್ ಬಂದ ದಿನ ಇದು. ಈ ಸಂದರ್ಭದಲ್ಲಿ ಅವರನ್ನು ನೋಡಲು ಜನ ಸಾಗರವೇ ನೆರೆದಿತ್ತು. ಅಪ್ಪಾ, ನಿಜಕ್ಕೂ ನೀವು ದೇವರ ಮಗ, ನನ್ನ ತಂದೆ, ನಮ್ಮ ಕುಟುಂಬಕ್ಕಾಗಿ ಪ್ರಾರ್ಥಿಸುತ್ತಿರುವ, ಇಂದಿಗೂ ಪ್ರಾರ್ಥಿಸುತ್ತಲೇ ಇರುವ ಹೃದಯಗಳಿಗೆ ನನ್ನ ಧನ್ಯವಾದಗಳು' ಎಂದು ಭಾವಪೂರ್ಣವಾಗಿ ಹೇಳಿಕೊಂಡು ಆ ದಿನದ ವಿಡಿಯೋವೊಂದನ್ನು ಸೌಂದರ್ಯ ಷೇರ್ ಮಾಡಿಕೊಂಡಿದ್ದಾರೆ.
ಸೂಪರ್ ಸ್ಟಾರ್ ರಜನೀಕಾಂತ್ ಸದ್ಯಕ್ಕೆ 'ದರ್ಬಾರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎ.ಆರ್. ಮುರುಗದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ನಯನತಾರ ರಜನಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ ಬ್ಯಾನರ್ ಅಡಿ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ.