ಬಾಲನಟರಾಗಿ ಚಿತ್ರರಂಗಕ್ಕೆ ಬಂದ ಎಷ್ಟೋ ನಟ-ನಟಿಯರು ಇಂದಿಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ರೂಪಿಕಾ ಕೂಡಾ ಚಿತ್ರರಂಗಕ್ಕೆ ಬಂದು ಎಷ್ಟೋ ವರ್ಷಗಳಾಗಿವೆ. ಆ್ಯಕ್ಟಿಂಗ್ ಜೊತೆಗೆ ಅವರು ಡ್ಯಾನ್ಸ್ ಕ್ಲಾಸ್ ಕೂಡಾ ನಡೆಸುತ್ತಿದ್ಧಾರೆ.
ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ರೂಪಿಕಾ ಲಾಕ್ಡೌನ್ ವೇಲೆ ರೂಪಿಕಾ ಮನೆಯಲ್ಲಿ ಸುಮ್ಮನೆ ಕೂರದೆ ಕೆಲವು ಸಂಸ್ಥೆಗಳ ಜೊತೆ ಸೇರಿ ನಿರ್ಗತಿಕರಿಗೆ ಸಹಾಯ ಮಾಡಿದ್ದಾರೆ. ಹೆಸರಿಗೆ ತಕ್ಕಂತೆ ರೂಪಿಕಾ ನಿಜಕ್ಕೂ ರೂಪವತಿ. ಮುಗ್ಧ ನಗುವಿನ ಈ ಚೆಲುವೆ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟವರು. ಎಸ್. ನಾರಾಯಣ್ ನಿರ್ದೇಶನದ `ಚೆಲುವಿನ ಚಿಲಿಪಿಲಿ` ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದಾಗ ರೂಪಿಕಾಗೆ ಕೇವಲ 14 ವರ್ಷಗಳು.
ನಟ ಚರಣ್‌ರಾಜ್ ನಿರ್ದೇಶನದ ತೆಲುಗಿನ 'ಯಥಾರ್ಥ ಪ್ರೇಮಕಥ' ಚಿತ್ರದಲ್ಲಿ ಕೂಡಾ ನಾಯಕಿಯಾಗಿ ನಟಿಸಿದ್ದಾರೆ ರೂಪಿಕಾ. 'ಎಲ್ಲರೊಂದಿಗೆ ಬೆರೆತು ಬದುಕಿದರೆ ಅಹಂಕಾರ ನಮ್ಮಿಂದ ದೂರ ಉಳಿಯುತ್ತದೆ' ಎನ್ನುವ ಈ ನಟಿ ತಾವು ನಟಿಸಿರುವ ತೆಲುಗು ಚಿತ್ರಕ್ಕೂ ಡಬ್ಬಿಂಗ್ ಮಾಡಿದ್ದಾರೆ. ಕನ್ನಡದಲ್ಲಿ ಕೂಡಾ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ.
'ಗೆಜ್ಜೆ' ಎಂಬ ನೃತ್ಯಶಾಲೆ ನಡೆಸುತ್ತಿರುವ ರೂಪಿಕಾ ಬಿ.ಕಾಂ ಪದವಿ ಪಡೆದಿರುವ ರೂಪಿಕಾ 2015 ರಲ್ಲಿ ಭರತನಾಟ್ಯದಲ್ಲಿ ಪಿಹೆಚ್ಡಿ ಪಡೆದರು. ಶ್ರೀಮತಿ ಇಂದುಮತಿ ಅವರ ಬಳಿ ಭರತನಾಟ್ಯ ಕಲಿತಿರುವ ರೂಪಿಕಾ ಇದುವರೆಗೂ ಬಹಳಷ್ಟು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇದೇ ಜೂನ್ 19 ರಿಂದ ಶಂಕರಪುರಂನ ರಂಗದೊರೈ ಬಳಿ ಇರುವ ತಮ್ಮ'ಗೆಜ್ಜೆ' ನೃತ್ಯಶಾಲೆಯಲ್ಲಿ ಬಾಲಿವುಡ್ ಫ್ರೀ ಸ್ಟೈಲ್ ನೃತ್ಯ ತರಬೇತಿಯನ್ನು ಆರಂಭಿಸಲಿದ್ದು ಆಸಕ್ತರು ಬಂದು ಸೇರಬಹುದು ಎಂದು ರೂಪಿಕಾ ಹೇಳಿದ್ದಾರೆ.
9 ನೇ ವರ್ಷಕ್ಕೆ ಚಿತ್ರರಂಗಕ್ಕೆ ಬಂದು ಸುಮಾರು 20 ಸಿನಿಮಾಗಳಲ್ಲಿ ಅಭಿನಯಿಸಿರುವ ರೂಪಿಕಾ ಅಭಿನಯದ 'ಹಾದಿ ಬೀದಿ ಲವ್ ಸ್ಟೋರಿ' ಲಾಕ್ಡೌನ್ ಮುಗಿದ ನಂತರ ಬಿಡುಗಡೆಯಾಗಲಿದೆ.