ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಹಾಗೂ ಲಾಕ್ಡೌನ್ ಸಮಯದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿ ಮೆಚ್ಚುಗೆಗೆ ಒಳಗಾಗಿರುವ ಕಲಿಯುಗದ ಕರ್ಣ ನಟ ಸೋನು ಸೂದ್ ತಮ್ಮ ಸಮಾಜಮುಖಿ ಕೆಲಸ ಮುಂದುವರೆಸಿದ್ದಾರೆ.
ಯಾಕೂಬ್ ಎಂಬ ವ್ಯಕ್ತಿಗೆ ಸೊಂಟದ ಬದಲಾವಣೆ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನಡೆದಿದೆ.
ಸೊಂಟದ ಶಸ್ತ್ರಚಿಕಿತ್ಸೆಗೊಳಗಾದ ಯಾಕೂಬ್ ಕಳೆದ ನಾಲ್ಕು ವರ್ಷಗಳಿಂದ ಯಾಕೂಬ್ ಬೆಡ್ ಮೇಲೆ ಆತನ ಜೀವನ ನಡೆದಿತ್ತು. ಏಳುವುದಕ್ಕೆ, ನಡೆಯುವುದಕ್ಕೆ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣಗೊಂಡಿತ್ತು. ಆದರೆ ಇದೀಗ ಏಮ್ಸ್ನಲ್ಲಿ ಯಶಸ್ವಿ ಚಿಕಿತ್ಸೆ ನಡೆಸಲಾಗಿದೆ. ಅದಕ್ಕೆ ಬೇಕಾದ ಎಲ್ಲ ರೀತಿಯ ಆರ್ಥಿಕ ಸಹಾಯ ಸೋನು ಸೂದ್ ಮಾಡಿದ್ದಾರೆ.
'ಕಲಿಯುಗದ ಕರ್ಣ'ನಿಂದ ವಿದ್ಯಾರ್ಥಿವೇತನ... ಬಡ ಮಕ್ಕಳಿಗೆ ತಾಯಿ ಹೆಸರಲ್ಲಿ ಸೋನು ಸೂದ್ ಸಹಾಯ!
ಇದಕ್ಕೆ ಸಂಬಂಧಿಸಿದಂತೆ ಏಮ್ಸ್ ಸಹಾಯಕ ಪ್ರೊಪೆಸರ್ ಡಾ. ಅಮರೀಂದರ್ ಸಿಂಗ್ ಮಾತನಾಡಿದ್ದು, ಇಡೀ ಪ್ರಕರಣ ಗೌಪ್ಯವಾಗಿದೆ. ಸೋನು ಸೂದ್ ಮತ್ತು ಏಮ್ಸ್ ಆಸ್ಪತ್ರೆಯ ಪ್ರಯತ್ನದಿಂದ ಯಾಕೂಬ್ಗೆ ಹೊಸ ಜೀವನ ಸಿಕ್ಕಿದೆ ಎಂದಿದ್ದಾರೆ. ಡಾ. ರಾಜೇಶ್ ಮಲ್ಹೋತ್ರಾ, ಡಾ, ಚೈತ್ರಾ ಹಾಗೂ ಡಾ. ದೀಪಕ್ ಗೌತಮ್ ಜಂಟಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಅದು ಯಶಸ್ವಿಯಾಗಿದೆ.
ಸಾವಿರಾರು ಬಡ ಕುಟುಂಬಗಳಿಗೆ ಸಹಾಯ ಮಾಡಿರುವ ನಟ ಸೋನು ಸೂದ್ ಈಗಾಗಲೇ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಮುಂದಾಗಿದ್ದು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ.