ಮುಂಬೈ: ಕೇರಳದಲ್ಲಿ ಸಿಲುಕಿದ್ದ ಒಡಿಶಾದ 169 ಯುವತಿಯರನ್ನು ವಿಮಾನದ ಮೂಲಕ ಅವರ ಮನೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ನಟ ಸೋನು ಸೂದ್ ಕಲ್ಪಿಸಿದ್ದಾರೆ.
ಕೇರಳದಲ್ಲಿ ಸಿಲುಕಿದ ಒಡಿಶಾ ಯುವತಿಯರ ರಕ್ಷಣೆ ಕೇರಳದ ಎರ್ನಾಕುಲಂನಲ್ಲಿ ಜವಳಿ ಕಾರ್ಖಾನೆಯಲ್ಲಿ ಹೊಲಿಗೆ ಮತ್ತು ಕಸೂತಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಲಾಕ್ಡೌನ್ ಹಿನ್ನೆಲೆ ತವರಿಗೆ ಮರಳಲು ಸಾಧ್ಯವಾಗದೆ ಅಲ್ಲಿಯೇ ಸಿಲುಕಿಕೊಂಡಿದ್ದರು. ನಟ ಸೋನು ಸೂದ್ ಅವರಿಗೆ ಭುವನೇಶ್ವರದಲ್ಲಿರುವ ತಮ್ಮ ಆಪ್ತ ಸ್ನೇಹಿತರು ಯುವತಿಯರು ಸಿಲುಕಿ ಹಾಕಿಕೊಂಡಿರುವ ಬಗ್ಗೆ ತಿಳಿಸಿದ್ದಾರೆ. ಇವರಿಗೆ ಸಹಾಯ ಮಾಡಲು ಮುಂದಾದ ಸೂದ್ ವಿಮಾನ ವ್ಯವಸ್ಥೆ ಕಲ್ಪಿಸಿದ್ದಾರೆ.
ಕೊಚ್ಚಿ ಮತ್ತು ಭುವನೇಶ್ವರ ಏರ್ಪೋರ್ಟ್ ಮೂಲಕ ವಿಶೇಷ ವಿಮಾನಗಳಲ್ಲಿ ಯುವತಿರನ್ನು ಕೊಂಡೊಯ್ಯಲು ಸರ್ಕಾರದ ಅನುಮತಿ ತೆಗೆದುಕೊಂಡರು. ಕೊಚ್ಚಿಯಿಂದ ಈ ಯುವತಿಯರನ್ನು ವಿಮಾನದಲ್ಲಿ ಸಾಗಿಸಲು ಬೆಂಗಳೂರಿನಿಂದ ವಿಶೇಷ ವಿಮಾನವನ್ನು ಕರೆಸಿಕೊಳ್ಳಲಾಗಿದೆ, ಅವರನ್ನು ಈಗ ಭುವನೇಶ್ವರಕ್ಕೆ ಕರೆದೊಯ್ಯಲಾಗುವುದು ಎಂದು ಮೂಲಗಳು ತಿಳಿಸಿವೆ.
ಕೇರಳದಲ್ಲಿ ಸಿಲುಕಿದ ಒಡಿಶಾ ಯುವತಿಯರ ರಕ್ಷಣೆ ರಾಜ್ಯಸಭಾ ಸಂಸದ ಅಮರ್ ಪಟ್ನಾಯಕ್ ಅವರು ಸೂದ್ ಅವರ "ಉದಾತ್ತ ಪ್ರಯತ್ನಗಳಿಗೆ" ಧನ್ಯವಾದ ಎಂದು ಟ್ವೀಟ್ ಮೂಲಕ ಧನ್ಯವಾದ ತಿಳಿಸಿದರು.
ನಟ ಸೋನು ಸೂದ್ ವಲಸಿಗರಿಗೆ ಮನೆಗೆ ತಲುಪಲು ಸಹಾಯ ಮಾಡಲೆಂದೇ ಟೋಲ್ ಫ್ರೀ ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ.