ಡ್ರಗ್ಸ್ ಜಾಲದ ಆರೋಪಿಗಳನ್ನು ಪೊಲೀಸರು ಬಂಧಿಸಿದಾಗಿನಿಂದ ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾದ್ದೇ ಸದ್ದು. ಇದರೊಂದಿಗೆ ನನಗೆ ಭದ್ರತೆ ನೀಡಿದರೆ ಡ್ರಗ್ಸ್ ದಂಧೆಯೊಂದಿಗೆ ನಂಟು ಇರುವವರ ಹೆಸರು ಹೇಳುತ್ತೇನೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದಾಗಿನಿಂದ ಸಿಸಿಬಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಕನ್ನಡ ಚಿತ್ರರಂಗದ ಬಗ್ಗೆ ಅಪಪ್ರಚಾರ ಬೇಡ...ಸೋನು ಗೌಡ ಮನವಿ - Sandalwood actress Sonu gowda
ಡ್ರಗ್ಸ್ ದಂಧೆ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ತರಬೇಡಿ. ಚಿತ್ರರಂಗದಲ್ಲಿ ಇರುವವರೆಲ್ಲಾ ಕೆಟ್ಟವರಲ್ಲ ಎಂದು ನಟಿ ಸೋನು ಗೌಡ ಮನವಿ ಮಾಡಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸ್ಯಾಂಡಲ್ವುಡ್ ನಟಿ ಸೋನು ಗೌಡ, ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಸುದ್ದಿಯನ್ನು ನೋಡಿದರೆ ಕನ್ನಡ ಚಿತ್ರರಂಗದಲ್ಲಿ ಇರುವವರೆಲ್ಲಾ ಕೆಟ್ಟವರು ಎಂದು ಬೇರೆ ಭಾಷೆಯವರು ತಪ್ಪು ತಿಳಿಯುತ್ತಾರೆ. ಚಿತ್ರರಂಗದಲ್ಲಿ ಇರುವವರೆಲ್ಲಾ ಕೆಟ್ಟವರಲ್ಲ. ದಯವಿಟ್ಟು ಕನ್ನಡ ಚಿತ್ರರಂಗದ ಬಗ್ಗೆ ಹೀಗೆಲ್ಲಾ ಅಪಪ್ರಚಾರ ಮಾಡಬೇಡಿ. ಸದ್ಯಕ್ಕೆ ಕನ್ನಡ ಚಿತ್ರರಂಗಕ್ಕೆ ಬೇರೆ ಭಾಷೆಗಳಲ್ಲಿ ಒಳ್ಳೆಯ ಹೆಸರಿದೆ. ಆದರೆ ಹೀಗೆ ಡ್ರಗ್ಸ್ ವಿಚಾರದಲ್ಲಿ ಇಲ್ಲಸಲ್ಲದ ಅಪಪ್ರಚಾರ ಮಾಡಿ ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ತರಬೇಡಿ ಎಂದು ಮನವಿ ಮಾಡಿದ್ದಾರೆ.