ಕರ್ನಾಟಕ

karnataka

ETV Bharat / sitara

ಮಗಳ ಶಾಲೆಯಲ್ಲಿ ಹಗ್ಗ-ಜಗ್ಗಾಟವಾಡಿದ ನಟಿ: ವಿಡಿಯೋ - Soha Ali Khan latest updates

ಬಾಲಿವುಡ್​ ನಟಿ ಸೋಹಾ ಅಲಿಖಾನ್​ ತನ್ನ ಮಗಳ ಶಾಲಾ ಕ್ರೀಡಾ ಕೂಟದಲ್ಲಿ ಭಾಗಿಯಾಗಿ ಸಖತ್​​ ಎಂಜಾಯ್​ ಮಾಡಿದ್ದಾರೆ.

Soha falls playing tug-of-war at Inaaya's sports day
ಮಗಳ ಶಾಲೆಯಲ್ಲಿ ಅಗ್ಗ-ಜಗ್ಗಾಟವಾಡಿದ ನಟಿ

By

Published : Feb 8, 2020, 2:34 PM IST

ಬಾಲಿವುಡ್​ ನಟಿ ಸೋಹಾ ಅಲಿಖಾನ್​ ತನ್ನ ಮಗಳ ಶಾಲಾ ಕ್ರೀಡಾ ಕೂಟದಲ್ಲಿ ಭಾಗಿಯಾಗಿ ಸಖತ್​​ ಎಂಜಾಯ್​ ಮಾಡಿದ್ದಾರೆ. ಪುತ್ರಿ ಇನಾಯ ನೌಮಿ ಕೇಮು ಶಾಲೆಯಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ. ಪೋಷಕರಾಗಿ ಶಾಲಾ ಕ್ರೀಡಾಂಗಣಕ್ಕೆ ತೆರಳಿದ್ದ ಸೋಹಾ, ಮಗಳು ಮತ್ತು ಶಾಲಾ ಮಕ್ಕಳು ಜತೆ ಆಟವಾಡಿ ಖುಷಿ ಪಟ್ಟರು.

ಈ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿರುವ ಸೋಹಾ, ಪೋಷಕರಾಗಿ ಇದು ನನ್ನ ಮೊದಲ ಕ್ರೀಡಾ ದಿನ. ಹಗ್ಗ ಜಗ್ಗಾಟ ಆಟದವಾಡಿದೆವು. ಕ್ರೀಡೆಯನ್ನು ಆಯೋಜನೆ ಮಾಡಿದ್ದಕ್ಕೆ ಶಾಲೆಗೆ ಧನ್ಯವಾದ ಎಂದಿದ್ದಾರೆ.

ವಿಡಿಯೋದಲ್ಲಿ ಎರಡು ಗುಂಪಿನ ನಡುವೆ ಹಗ್ಗ ಜಗ್ಗಾಟದ ದೃಶ್ಯವಿದೆ. ಇದರಲ್ಲಿ ಎದುರಾಳಿ ತಂಡದ ವಿರುದ್ಧ ನಟಿ ಸೋಹಾ ಟೀಂ ಸೋಲುತ್ತದೆ.

ABOUT THE AUTHOR

...view details