ಒಂದು ಕೊಲೆಯಿಂದ ಶುರುವಾಗುವ ಟ್ರೇಲರ್ ಥ್ರಿಲ್ಲಿಂಗ್, ಸಸ್ಪೆನ್ಸ್ ಹಾಗೂ ರೋಚಕವಾಗಿದೆ. ಹಿರಿಯ ನಟ ಅನಂತ್ ನಾಗ್, ಅಪರೇಷನ್ ಆಲಮೆಲ್ಲಮ್ಮ ಚಿತ್ರ ಖ್ಯಾತಿಯ ರಿಷಿ. ರೋಷಿನಿ ಪ್ರಕಾಶ್, ಸಮಂತಾ ಶೆಟ್ಟಿ, ಸುಮನ್ ರಂಗನಾಥ್ ಕ್ಯಾರೆಕ್ಟರ್ ನೋಡುಗರಲ್ಲಿ ಕ್ಯುರಿಯಾಸಿಟಿ ಹುಟ್ಟಿಸುತ್ತೆ. ಚಿತ್ರದಲ್ಲಿ ಟ್ರಾಫಿಕ್ ಪೊಲೀಸ್ ಆಗಿರುವ ರಿಷಿ, ಕೊಲೆಯ ರಹಸ್ಯ ಹೇಗೆ ಭೇದಿಸುತ್ತಾರೆ ಅನ್ನೋ ಥ್ರಿಲ್ಲಿಂಗ್ ವಿಚಾರ ಟ್ರೇಲರ್ನಲ್ಲಿದೆ.
ಸಂಶಯದೊಳಗೆ ಥ್ರಿಲ್ ನೀಡುವ 'ಕವಲುದಾರಿ' ಟ್ರೇಲರ್!! - undefined
ನಟ ಪುನೀತ್ ರಾಜ್‍ಕುಮಾರ್ ಅವರ 'ಪಿಆರ್ಕೆ' ಪ್ರೊಡಕ್ಷನ್ ಬ್ಯಾನರ್ನಡಿ ನಿರ್ಮಾಣವಾಗಿರುವ ಕವಲುದಾರಿ ಚಿತ್ರದ ಟ್ರೇಲರ್ ಇಂದು ಅಧಿಕೃತವಾಗಿ ರಿಲೀಸ್ ಆಗಿದೆ.
![ಸಂಶಯದೊಳಗೆ ಥ್ರಿಲ್ ನೀಡುವ 'ಕವಲುದಾರಿ' ಟ್ರೇಲರ್!!](https://etvbharatimages.akamaized.net/etvbharat/images/768-512-2905046-thumbnail-3x2-kavaludari.jpg)
ಕವಲುದಾರಿ
ಇನ್ನು 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಚಿತ್ರದ ನಂತ್ರ ನಿರ್ದೇಶಕ ಹೇಮಂತ್ ರಾವ್ 'ಕವಲುದಾರಿ'ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಶ್ವಿನಿ ಪುನೀತ್ ರಾಜ್‍ಕುಮಾರ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದೇ 12 ರಂದು ತೆರೆ ಕಾಣುತ್ತಿರುವ 'ಕವಲುದಾರಿ' ಚಿತ್ರದ ಟ್ರೇಲರ್ ಯೂಟ್ಯೂಬ್ನಲ್ಲಿ ಹಲ್ ಚಲ್ ಎಬ್ಬಿಸಿದೆ.