ಕರ್ನಾಟಕ

karnataka

ETV Bharat / sitara

'ವರ್ಲ್ಡ್​​ ಸ್ನೇಕ್ ಡೇ' ಯಂದು ಸಿಂಪಲ್ ಸುಂದರಿ ಮನೆಗೆ ಬಂದ ವಿಶೇಷ ಅತಿಥಿ - Simple beauty Shwetha srivatsav

ಸ್ಯಾಂಡಲ್​ವುಡ್​​ ನಟಿ ಶ್ವೇತಾ ಶ್ರೀವಾತ್ಸವ ಮನೆ ಅಂಗಳದಲ್ಲಿ ವರ್ಲ್ಡ್​​ ಸ್ನೇಕ್ ಡೇ ಆದ ಇಂದು ಹಾವು ಬಂದಿದ್ದು ಈ ವಿಡಿಯೋವನ್ನು ಶ್ವೇತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Snake arrived Shwetha srivatsav home
ಸಿಂಪಲ್ ಸುಂದರಿ

By

Published : Jul 16, 2020, 5:50 PM IST

ಇಂದು 'ವಿಶ್ವ ಹಾವುಗಳ ದಿನ'. ಈ ದಿನದಂದೇ ಸ್ಯಾಂಡಲ್​​ವುಡ್ ಸಿಂಪಲ್ ಸುಂದರಿ ಶ್ವೇತಾ ಶ್ರೀವಾತ್ಸವ್​ ಮನೆಗೆ ಸರ್ರ್ಪೈಸ್ ಆಗಿ ಒಬ್ಬರು ವಿಶೇಷ ಅತಿಥಿ ಎಂಟ್ರಿ ಕೊಟ್ಟಿದ್ದಾರೆ. ಆ ವಿಶೇಷ ಅತಿಥಿ ನೋಡಿ ಶ್ವೇತಾ ಪುತ್ರಿ ಅಶ್ಮಿತಾ ಥ್ರಿಲ್ ಆಗಿದ್ದಾರೆ.

ಶ್ವೇತಾ ಮನೆಗೆ ಬಂದ ಹಾವು

ಶ್ವೇತಾ ಮನೆಯ ಗಾರ್ಡನ್ ಗೋಡೆಯ ಅಂಚಿನಲ್ಲಿ ಹರಿದು ಹೋಗುತ್ತಿದ್ದ ಹಾವನ್ನು ಪತಿ ಅಮಿತ್ ಶ್ರೀವಾತ್ಸವ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಶ್ವೇತಾ, ನನ್ನ ಮಗಳು ಮೊದಲ ಬಾರಿ ಹಾವನ್ನು ನೋಡಿದ್ದಾಳೆ ವರ್ಲ್ಡ್​​ ಸ್ನೇಕ್ ಡೇ ಯಂದೇ ಈ ಹಾವು ನಮ್ಮ ಮನೆಗೆ ಬಂದಿರುವುದು ನಮಗೆ ಆಶ್ಚರ್ಯವಾಗಿದೆ ಎಂದು ಶ್ವೇತಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಾವೆಲ್ಲಾ ಪ್ರಕೃತಿಯ ಮಡಿಲಲ್ಲಿ ವಾಸಿಸುತ್ತಿದ್ದೇವೆ. ಯಾರೂ ಕೂಡಾ ಪ್ರಾಣಿ, ಪಕ್ಷಿಗಳಿಗೆ ತೊಂದರೆ ನೀಡಬೇಡಿ ಎಂದು ಶ್ವೇತಾ ಮನವಿ ಮಾಡಿದ್ದಾರೆ.

ಪುತ್ರಿ ಅಶ್ಮಿತಾ ಜೊತೆ ಶ್ವೇತಾ

ABOUT THE AUTHOR

...view details