ಟಿಆರ್ಪಿಯಲ್ಲಿ ನಂ.1 ಸ್ಥಾನ ಪಡೆದಿರುವ ಜೊತೆ ಜೊತೆಯಲಿ ಧಾರಾವಾಹಿಯ ಟೈಟಲ್ ಟ್ರ್ಯಾಕ್ ಯಾರಿಗೆ ತಾನೆ ಗೊತ್ತಿಲ್ಲ. ನಿತ್ಯ ನೋಡುವ ಗೃಹಿಣಿಯರಿಗೆ ಬಾಯಿಪಾಠವಾಗಿರುವ ಈ ಹಾಡನ್ನು ಯಾರಪ್ಪಾ ಬರೆದೋರು ಅನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಗೃಹಿಣಿಯರು ಕಂಠಪಾಠ ಮಾಡಿರುವ ಜೊತೆಜೊತೆಯಲಿ ಟೈಟಲ್ ಟ್ರ್ಯಾಕ್ ಬರೆದವರು ಯಾರು ಗೊತ್ತೇ? - ಸಂಗೀತ ನಿರ್ದೇಶನ ಸುನಾದ್ ಗೌತಮ್
ಕಿರುತೆರೆಯ ನಂಬರ್ ಒನ್ ಸ್ಥಾನ ಪಡೆದಿರುವ ಜೊತೆಜೊತೆಯಲಿ ಧಾರಾವಾಹಿಯ 'ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು' ಹಾಡಿನದ್ದೇ ಕಾರುಬಾರು!
ಜೊತೆಜೊತೆಯಲಿ ಧಾರಾವಾಹಿ
ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು ಎಂಬ ಫಿಮೇಲ್ ವರ್ಶನ್ ಹಾಡಿರುವುದು ಸುನಾದ್ ಗೌತಮ್ ಅವರ ತಂಗಿ ನಿನಾದ ನಾಯಕ್ ಅವರು. ನಿನಾದ ಅವರಿಗೆ ಜೊತೆಯಾಗಿರುವುದು ಬೇರಾರೂ ಅಲ್ಲ, ನಿಹಾಲ್ ತಾವ್ರೋ ಮತ್ತು ರಜತ್ ಹೆಗಡೆ. ಎಲ್ಲಾ ಕಡೆ ಸದ್ದು ಮಾಡುತ್ತಿರುವ ಈ ಬೊಂಬಾಟ್ ಹಾಡಿನ ಹಿಂದಿರುವ ಮಾಂತ್ರಿಕ ಶಕ್ತಿ ಇವರುಗಳೇ.