ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸಂಘರ್ಷ' ಧಾರಾವಾಹಿಯಲ್ಲಿ ಜಿಲ್ಲಾಧಿಕಾರಿ ಇಂದಿರಾ ಸತ್ಯಮೂರ್ತಿ ಆಗಿ ನಟಿಸುತ್ತಿರುವ ನಟಿ ತೇಜಸ್ವಿನಿ ಈಗ ಬೆಳ್ಳಿತೆರೆಗೆ ಪ್ರಮೋಷನ್ ಪಡೆದಿದ್ದಾರೆ. 'ಲಾಂಗ್ ಡ್ರೈವ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ತೇಜಸ್ವಿನಿ ಕಿರುತೆರೆಯಿಂದ ಹಿರಿತೆರೆಗೆ ಪ್ರಮೋಷನ್ ಪಡೆದಿದ್ದಾರೆ.
ಬೆಳ್ಳಿತೆರೆಗೆ 'ಲಾಂಗ್ ಡ್ರೈವ್' ಹೊರಟ ಕಿರುತೆರೆ ನಟಿ ತೇಜಸ್ವಿನಿ - Sangharsha serial actress Tejaswini
'ಸಂಘರ್ಷ' ಧಾರಾವಾಹಿಯಲ್ಲಿ ಇಂದಿರಾ ಸತ್ಯಮೂರ್ತಿ ಆಗಿ ನಟಿಸುವ ಮೂಲಕ ಕಿರುತೆರೆಪ್ರಿಯರ ಮನ ಸೆಳೆದಿದ್ದ ತೇಜಸ್ವಿನಿ ಇದೀಗ ಬೆಳ್ಳಿತೆರೆಯಲ್ಲೂ ಬ್ಯುಸಿ ಆಗಿದ್ದಾರೆ. 'ಲಾಂಗ್ ಡ್ರೈವ್' ಚಿತ್ರದಲ್ಲಿ ತೇಜಸ್ವಿನಿ ನಟಿಸುವ ಮೂಲಕ ಹಿರಿತೆರೆಗೆ ಎಂಟ್ರಿ ನೀಡಿದ್ದಾರೆ.
ಇದನ್ನೂ ಓದಿ: 'ರಾಬರ್ಟ್' ಚಿತ್ರ ನಿರ್ಮಾಪಕ ಉಮಾಪತಿ ಕೊಲೆಗೆ ಸ್ಕೆಚ್, ಆರೋಪಿಗಳು ವಶಕ್ಕೆ
ಬಯಸದೆ ಬಣ್ಣದ ಲೋಕಕ್ಕೆ ಬಂದ ತೇಜಸ್ವಿನಿ ಇಂದು ನಟನಾ ಜಗತ್ತಿನಲ್ಲಿ ಬ್ಯುಸಿಯಾಗಿದ್ದಾರೆ. 'ಸೌಭಾಗ್ಯವತಿ' ಧಾರಾವಾಹಿ ಮೂಲಕ ನಟನೆ ಆರಂಭಿಸಿದ ತೇಜಸ್ವಿನಿ ನಂತರ ಮಧುಬಾಲಾ, ಮಹಾನದಿ, ನೀಲಿ ಧಾರಾವಾಹಿಯಲ್ಲಿ ನಟಿಸಿದ್ದರು. ಮಹಾನದಿಯ ಮೇಘನಾ ಪಾತ್ರ ತೇಜಸ್ವಿನಿ ಅವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತು. 'ನೀಲಿ' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಕೂಡಾ ಮೋಡಿ ಮಾಡಿರುವ ತೇಜಸ್ವಿನಿ ಸದ್ಯ ಜಿಲ್ಲಾಧಿಕಾರಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. " ನಟನೆ ಎಂಬುದು ಬರೀ ಒಂದೆರಡು ದಿನಗಳಲ್ಲಿ ಕಲಿತು ಬರುವಂಥ ವಿದ್ಯೆಯಲ್ಲ, ಬದಲಿಗೆ ಸರಿಯಾದ ಅನುಭವವೇ ನಟನೆಯನ್ನು ಕಲಿಸುತ್ತದೆ ಎಂಬುದು ತೇಜಸ್ವಿನಿ ಅಭಿಪ್ರಾಯ. ನಟನಾರಂಗಕ್ಕೆ ಬಂದು ಉತ್ತಮ ಕೆಲಸ ಮಾಡಿದ್ದೇನೆ ಎಂದು ಹೇಳುವ ತೇಜಸ್ವಿನಿಗೆ ಒಂದೇ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಸುತಾರಾಂ ಇಷ್ಟವಿಲ್ಲವಂತೆ. ಕಲಾವಿದರು ಎಂದ ಮೇಲೆ ವಿಭಿನ್ನ ಪಾತ್ರಗಳಲ್ಲಿ ನಟಿಸಬೇಕು ಎಂದು ತೇಜಸ್ವಿನಿ ಹೇಳಿದ್ದಾರೆ.