ಕರ್ನಾಟಕ

karnataka

ETV Bharat / sitara

'ರಾಬರ್ಟ್' ಚಿತ್ರ​​​ ನಿರ್ಮಾಪಕ ಉಮಾಪತಿ ಕೊಲೆಗೆ ಸ್ಕೆಚ್, ಆರೋಪಿಗಳು ವಶಕ್ಕೆ - producer Umapati

ಚಿತ್ರ ನಿರ್ಮಾಪಕ ಉಮಾಪತಿ ಹಾಗೂ ಅವರ ಸಹೋದರ ದೀಪಕ್ ಸೇರಿದಂತೆ ನಾಲ್ವರ ಕೊಲೆಗೆ ಸ್ಕೆಚ್ ಹಾಕಿದ್ದ 7 ಆರೋಪಿಗಳನ್ನು ಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಬರ್ಟ್​​​ ನಿರ್ಮಾಪಕ ಉಮಾಪತಿ ಕೊಲೆಗೆ ಸ್ಕೆಚ್​​ : ಆರೋಪಿಗಳು ವಶಕ್ಕೆ
ರಾಬರ್ಟ್​​​ ನಿರ್ಮಾಪಕ ಉಮಾಪತಿ ಕೊಲೆಗೆ ಸ್ಕೆಚ್​​ : ಆರೋಪಿಗಳು ವಶಕ್ಕೆ

By

Published : Dec 20, 2020, 8:19 PM IST

ಬೆಂಗಳೂರು: ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಹಾಗೂ ಅವರ ಸಹೋದರ ದೀಪಕ್ ಸೇರಿದಂತೆ ನಾಲ್ವರ ಕೊಲೆಗೆ ಸ್ಕೆಚ್ ಹಾಕಿದ್ದ ಏಳು ಜನರನ್ನು ಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉಮಾಪತಿ ಹಾಗೂ ದೀಪಕ್ ಮೇಲೆ ಹಲ್ಲೆ ಮಾಡಲು ಆರೋಪಿ ಮಂಜುನಾಥ್ ಹಾಗೂ ಆತನ ಸಹಚರರು ನ್ಯಾಷನಲ್​​ ಕಾಲೇಜು ಬಳಿ ಟೆಂಪೋದಲ್ಲಿ ಕಾದು ಕುಳಿತಿದ್ದರಂತೆ. ಈ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದ್ದು, ಕೂಡಲೇ ದಾಳಿ‌ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಡಿಸಿಪಿ ಹರೀಶ್ ಪಾಂಡೆ ಮಾಹಿತಿ

ಓದಿ: ಕುಟುಂಬದ ಜೊತೆ ಷಷ್ಠಿ ಪೂಜೆಯಲ್ಲಿ ಪಾಲ್ಗೊಂಡ ರಕ್ಷಿತ್​ ಶೆಟ್ಟಿ

ಸ್ಕೆಚ್​​ ಹಾಕಿದ್ದ ಆರೋಪಿಗಳು ನಾಲ್ವರಲ್ಲಿ ಯಾರೇ ಬಂದರೂ ಕೊಲೆ ಮಾಡಲೇಬೇಕೆಂದು ಎಂದು ಪ್ಲಾನ್ ಮಾಡಿದ್ದರಂತೆ. ಅಲ್ಲದೆ ಮಾರಕಾಸ್ತ್ರ ಹಿಡಿದು ಕಾದು ಕುಳಿತ್ತಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ. ರೌಡಿಶೀಟರ್ ಸೈಕಲ್ ರವಿ, ಸಹಚರ ಬೇಕರಿ ರಘು, ಉಮಾಪತಿ ಹಾಗೂ ದೀಪಕ್ ಕೊಲೆಗೆ ಸ್ಕೆಚ್ ಹಾಕಿದ್ದ ಎನ್ನಲಾಗುತ್ತಿದೆ.

ನಿನ್ನೆ ರಾತ್ರಿ ದಾಳಿ ಮಾಡಿದ ಪೊಲೀಸರು ರೌಡಿಶೀಟರ್ ಭರತ್ ಕುಮಾರ್ ಸೇರಿ ಏಳು ಜನರನ್ನು ವಶಕ್ಕೆ ಪಡೆದಿದ್ದು, ಕೆಲವರು ಅಲ್ಲಿಂದ ಪರಾರಿಯಾಗಿದ್ದಾರೆ.

ABOUT THE AUTHOR

...view details