ಇತ್ತೀಚೆಗೆ ಸುದ್ದಿಗಳನ್ನು ವೈಭವೀಕರಿಸುತ್ತಿರುವುದು ಹೆಚ್ಚಾಗುತ್ತಿದೆ. ಇದರಿಂದ ಹಲವರಿಗೆ ಕಿರಿಕಿರಿ ಉಂಟಾಗುತ್ತಿರುವುದು ನಿಜ. ಇದಕ್ಕೆ ಗಾಯಕ ರಘು ದೀಕ್ಷಿತ್ ಸಹ ತುತ್ತಾಗಿದ್ದಾರೆ.
ಕನ್ನಡದ ಖ್ಯಾತ ಗಾಯಕ ರಘು ದೀಕ್ಷಿತ್ ಆತ್ಮಹತ್ಯೆ ಎಂಬ ಸುಳ್ಳುಸುದ್ದಿ ವೈರಲ್ ಆಗುತ್ತಿದ್ದಂತೆ, ನಾನಿನ್ನೂ ಜೀವಂತವಾಗಿದ್ದೇನೆಂದು ರಘು ದೀಕ್ಷಿತ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. "ಖ್ಯಾತ ಗಾಯಕ ರಘು ದೀಕ್ಷಿತ್ ಆತ್ಮಹತ್ಯೆ! ಕಣ್ಣೀರಿನಲ್ಲಿ ಕನ್ನಡ ಚಿತ್ರರಂಗಕ್ಕೆ ಏನಾಯ್ತು?" ಎಂದು ಹೆಡ್‍ಲೈನ್ ಹಾಕಿ ಯೂಟ್ಯೂಬ್‍ನಲ್ಲಿ ಒಂದು ವಿಡಿಯೋ ಅಪ್ಲೋಡ್ ಆಗಿತ್ತು. ಈ ವಿಡಿಯೋ ನೋಡಿದ ರಘು ದೀಕ್ಷಿತ್ ಸ್ವತಃ ತಾವೇ ದಂಗಾಗಿ ಆ ಸುದ್ದಿಯ ಸ್ಕ್ರೀನ್ ಶಾಟ್ ತೆಗದು ಹೀಗೂ ಉಂಟೇ!!! ನಾನೂ ಅನೇಕ ಕೆಟ್ಟ ಘಟನೆಗಳನ್ನು ಜೀವನದಲ್ಲಿ ಅನುಭವಿಸಿ ಅದನ್ನು ದಾಟಿ ಮುಂದೆ ಬಂದಿದ್ದೇನೆ, ಅದರೊಂದಿಗೆ ಇದನ್ನು ಕೂಡ ಕೇಕ್‍ನ ಒಂದು ಭಾಗವನ್ನು ತಿಂದಂತೆ ಸ್ವೀಕರಿಸಿದ್ದೇನೆ. ನಾನಿನ್ನೂ ಜೀವಂತವಾಗಿದ್ದೇನೆ ಎಂದು ಹೇಳಿದ್ದಾರೆ.