ಕರ್ನಾಟಕ

karnataka

ETV Bharat / sitara

ಪಕ್ಕದಮನೆ ವಿಷ್ಯ ಹೇಳೋಕೆ ಬರ್ತಿದ್ದಾರೆ ಬಿಗ್ ಬಾಸ್ ಖ್ಯಾತಿ ನವೀನ್ ಸಜ್ಜು..!!! - ಬಡ್ಡಿ ಮಗನ್ ಲೈಫ್

ಎಣ್ಣೆ ನಮ್ದು, ಊಟ ನಿಮ್ದು ಹಾಡಿನ ಮೂಲಕ‌ ಮನೆ ಮಾತಾಗಿ ಬಿಗ್ ಬಾಸ್ ಮನೆ ಸೇರಿದ್ದ ನವೀನ್ ಸಜ್ಜು ಲೂಸಿಯಾ ಖ್ಯಾತಿಯ ಪೂರ್ಣ ಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿರುವ ಬಡ್ಡಿ ಮಗನ್ ಲೈಫ್ ಚಿತ್ರದ ಹಾಡಿಗೆ ಧ್ವನಿ ನೀಡಿದ್ದಾರೆ. ಸದ್ಯ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

Singer Naveen Sajju

By

Published : Aug 31, 2019, 7:02 PM IST

ದುನಿಯಾ ವಿಜಯ್ ನಟನೆಯ ಕನಕ ಚಿತ್ರದಲ್ಲಿ ಎಣ್ಣೆ ನಮ್ದು, ಊಟ ನಿಮ್ದು ಹಾಡಿನ ಮೂಲಕ‌ ಮನೆ ಮಾತಾಗಿ ಬಿಗ್ ಬಾಸ್ ಮನೆ ಸೇರಿದ್ದ ನವೀನ್ ಸಜ್ಜು ಈಗ ಪಕ್ಕದ ಮನೆ ವಿಷ್ಯನ ಹೇಳೋಕೆ ರೆಡಿಯಾಗಿದ್ದಾರೆ.

ಗಾಯಕ ನವೀನ್​ ಸಜ್ಜು..

ಬಡ್ಡಿ ಮಗನ್ ಲೈಫ್ ಚಿತ್ರದಲ್ಲಿ ನಟಿಸಿದ್ದ ಲೂಸಿಯಾ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿಗೆ ನವೀನ್ ಸಜ್ಜು ಧ್ವನಿ ನೀಡಿದ್ದಾರೆ. ಹರಿ ಕಥೆ ಶೈಲಿಯಲ್ಲಿರುವ ಈ ಹಾಡು ಪಡ್ಡೆಗಳ ತಲೆಕೆಡಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ದಿನನಿತ್ಯ ನಮ್ಮ ಕಣ್ಣೆದುರು ನಡೆಯುವ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾ ಕಥೆ ಬರೆದಿದ್ದು, ಪವನ್ ಹಾಗೂ ಪ್ರಸಾದ್ ನಿರ್ದೇಶಿಸಿದ್ದಾರೆ. ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ. ಟೈಟಲ್​ ಮೂಲಕವೇ ಅಟ್ಯ್ರಾಕ್ಟ್ ಮಾಡೋ ಈ ಸಿನಿಮಾದ ಪ್ರಮೋಷನ್ ಸಾಂಗ್ ಜೋರಾಗೆ ಸದ್ದು ಮಾಡುತ್ತಿದೆ.ಇನ್ನೂ ಚಿತ್ರದಲ್ಲಿ ಐಶ್ವರ್ಯ ರಾವ್ ನಾಯಕಿಯಾಗಿ ನಟಿಸಿದ್ದು, ಸಚಿನ್ ಶ್ರೀಧರ್ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಹಾಗೂ ಬಾಲ ರಾಜ್ವಾಡಿ ಸಹ ತಾರಾಗಣದಲ್ಲಿರುವ ಈ ಚಿತ್ರಕ್ಕೆ ಲವಿತ್ ಅವರ ಛಾಯಗ್ರಣವಿದೆ.

ABOUT THE AUTHOR

...view details