ಲಖನೌ:ಖ್ಯಾತ ಗಾಯಕಿ ಕನಿಕಾ ಕಪೂರ್ ಮಹಾಮಾರಿ ಕೊರೊನಾ ಹಿಡಿತದಿಂದ ಬಚಾವ್ ಆಗಿದ್ದಾರೆ. ವಿದೇಶದಿಂದ ವಾಪಸ್ ಬರುತ್ತಾ ಸೋಂಕು ತಗುಲಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರಿಗೆ ನಡೆಸಲಾದ 6ನೇ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾಮುಕ್ತರಾಗಿದ್ದು ಖಾತ್ರಿಯಾಗಿದೆ. ಹೀಗಾಗಿ ಮೊಗದಲ್ಲಿ ನಗು ತುಂಬಿಕೊಂಡ ಸುಂದರಿ ಆಸ್ಪತ್ರೆಯಿಂದ ಮನೆ ಕಡೆಗೆ ತೆರಳಿದರು.
ಕೊನೆಗೂ ಕೊರೊನಾ ಸಂಕಟದಿಂದ ಹೊರಬಂದ ಕನಿಕಾ: ಆಸ್ಪತ್ರೆಯಿಂದ ಮನೆಗೆ ಮರಳಿದ ಪ್ರಸಿದ್ಧ ಗಾಯಕಿ - ಸಿಂಗರ್ ಕನಿಕಾ ಕಪೂರ್
ಬಾಲಿವುಡ್‌ನ ಖ್ಯಾತ ಗಾಯಕಿ ಕನಿಕಾ ಕಪೂರ್ ಕೊರೊನಾ ಕಾಯಿಲೆಯಿಂದ ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.
Singer Kanika Kapoor has been discharged from hospital
ಕಪೂರ್ ಲಖನೌದ ಸಂಜಯ್ ಗಾಂಧಿ ಮೆಡಿಕಲ್ ಕಾಲೇಜ್ನಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಈಕೆಗೆ 5ನೇ ಬಾರಿಗೆ ನಡೆಸಿದ ಪರೀಕ್ಷೆಯಲ್ಲಿ ವೈರಸ್ ತಗುಲಿರುವುದು ಪತ್ತೆಯಾಗಿತ್ತು. ಹೀಗಾಗಿ ಪ್ರತಿ 48 ಗಂಟೆಗೊಮ್ಮೆ ಅವರ ರಕ್ತದ ಮಾದರಿಯನ್ನು ತಪಾಸಣೆ ಮಾಡಲಾಗುತ್ತಿತ್ತು.
ಲಂಡನ್ನಿಂದ ಭಾರತಕ್ಕೆ ವಾಪಸ್ ಆಗಿದ್ದ ಪ್ರಸಿದ್ಧ ಗಾಯಕಿಯಲ್ಲಿ ಕೊರೊನಾ ವೈರಸ್ ಕಂಡು ಬಂದಿತ್ತು. ಆಸ್ಪತ್ರೆಗೆ ದಾಖಲಾಗುವುದಕ್ಕೂ ಮುನ್ನ ಅವರು ಸಾಕಷ್ಟು ಸಂತೋಷಕೂಟಗಳಲ್ಲಿ ಪಾಲ್ಗೊಂಡಿದ್ದರು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.