ಸ್ಯಾಂಡಲ್ವುಡ್ನ ಪ್ರಸಿದ್ಧ ಗಾಯಕ ಹೇಮಂತ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ವೈದ್ಯೆ ಕೃತಿಕಾ ಎಂಬುವರ ಜೊತೆಗೆ ಅವರು ಇಂದು ಸಪ್ತಪದಿ ತುಳಿದಿದ್ದಾರೆ.
ವೈದ್ಯೆ ಕೃತಿಕಾ ಜೊತೆ ಸಪ್ತಪದಿ ತುಳಿದ ಗಾಯಕ ಹೇಮಂತ್ ಕುಮಾರ್ ಬೆಂಗಳೂರಿನಲ್ಲಿ ಕೃತಿಕಾ ಜೊತೆ ಹೇಮಂತ್ ಕುಮಾರ್ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಕೃತಿಕಾ ನಗರದ ಸೇಂಟ್ಜಾನ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ಶಾಸ್ತ್ರಜ್ಞ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ಮದುವೆಗೆ ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ತಾರೆಯರು, ಗಾಯಕ - ಗಾಯಕಿಯರು, ಕುಟುಂಬದವರು, ಸ್ನೇಹಿತರು, ಚಿತ್ರರಂಗದ ಗಣ್ಯರು ಭಾಗವಹಿಸಿ ನೂತನ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.
ಅರ್ಜುನ್ ಜನ್ಯ ಕಂಪೋಸ್ ಮಾಡಿರುವ ಹಾಡುಗಳಿಗೆ ಧ್ವನಿ: ನಾದಬ್ರಹ್ಮ, ಹಂಸಲೇಖ ಹತ್ತಿರ ಮ್ಯೂಸಿಕ್ ಅಸಿಸ್ಟೆಂಟ್ ಆಗಿ, ವೃತ್ತಿ ಜೀವನ ಆರಂಭಿಸಿದ ಹೇಮಂತ್ ಕುಮಾರ್, ವಿ.ಮನೋಹರ್, ಗುರುಕಿರಣ್, ಸಾಧು ಕೋಕಿಲ, ಮನೋಮೂರ್ತಿ, ವಿ.ಶ್ರೀಧರ್, ವಿ.ಹರಿಕೃಷ್ಣ, ಅರ್ಜುನ್ ಜನ್ಯ ಕಂಪೋಸ್ ಮಾಡಿರುವ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಪ್ರೀತ್ಸೆ ಸಿನಿಮಾದ ಮೂಲಕ ಪ್ರಸಿದ್ಧಿ: ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಉಪೇಂದ್ರ, ಗಣೇಶ್, ಸುದೀಪ್, ದರ್ಶನ್, ಯಶ್‌ರಂತಹ ಸ್ಟಾರ್ ನಟರ ಚಿತ್ರಗಳಲ್ಲಿ ಅವರು ಹಾಡಿದ್ದಾರೆ. ಪ್ರೀತ್ಸೆ ಸಿನಿಮಾದ ಮೂಲಕ ಹೇಮಂತ್ ಕುಮಾರ್ ಬಹು ಬೇಡಿಕೆಯ ಗಾಯಕರಾಗಿ ಹೊರ ಹೊಮ್ಮಿದ್ದಾರೆ.
ಓದಿ:ಸೆಂಚುರಿ ಸ್ಟಾರ್ ಆಶೀರ್ವಾದ ಪಡೆದ ಬಿಗ್‌ಬಾಸ್ ವಿನ್ನರ್ ಮಂಜು ಪಾವಗಡ!