ತನ್ನ ವಿಶಿಷ್ಟ ಕಂಠದ ಮೂಲಕ ಕನ್ನಡ ಹಾಗೂ ಬೇರೆ ಭಾಷೆಯಲ್ಲೂ ಹಾಡಿನ ಮೂಲಕ ಹೆಸರು ಮಾಡಿರುವ ಅನನ್ಯ ಭಟ್ ಇದೀಗ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ತೆರೆಮೇಲೆ ಬರಲು ಸಿದ್ಧರಾಗಿದ್ದಾರೆ.
ಸೇನಾಪುರ ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಈ ಚಿತ್ರದ ಬಗ್ಗೆ ಹಲವು ವಿಚಾರಗಳ ಹಂಚಿಕೊಂಡಿದ್ದಾರೆ.
ಇದೊಂದು ನೈಜ ಘಟನೆ ಆಧಾರಿತ ಸಿನಿಮಾವಾಗಿದ್ದು, ಮುಗ್ಧ ಹಳ್ಳಿ ಜನರ ಸಮಸ್ಯೆಗಳ ಎತ್ತಿ ಹಿಡಿಯುವ ಕಥೆಯಂತೆ. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಅವರು ಗಾಯಕಿಯಾಗಲೂ ಸಹ ನಾಟಕವೇ ಕಾರಣವಾಗಿದೆ ಎಂದಿದ್ದಾರೆ.