ಕರ್ನಾಟಕ

karnataka

ETV Bharat / sitara

ಸರಳತೆಯ 'ಸಲಗ' ವಿಜಿಯಣ್ಣ : ಕೊಂಡಾಡಿದ ಸಿಂಗರ್​​ ನವೀನ್​ ಸಜ್ಜು - ಸಲಗ ಸಿನಿಮಾ

ಸದ್ಯ ದುನಿಯಾ ವಿಜಿ ತಮ್ಮ ಸಲಗ ಚಿತ್ರವನ್ನು ತೆರೆಗೆ ತರುವ ಬ್ಯುಸಿಯಲ್ಲಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿದ್ದು ಇದೇ ತಿಂಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ ಸಲಗ ಚಿತ್ರಕ್ಕೆ ಯಶಸ್ಸು ಸಿಗಲೆಂದು ಪ್ರಾರ್ಥಿಸಿದ್ದಾರೆ.

simplicity duniya vijay : naveen sajju
ಸರಳತೆಯ 'ಸಲಗ' ವಿಜಿಯಣ್ಣ : ಸಿಂಗರ್​​ ನವೀನ್​ ಸಜ್ಜು

By

Published : Mar 8, 2020, 7:04 PM IST

ಸ್ಟಾರ್​​ಗಿರಿ ಬಂದ ಮೇಲೆ ನಟ-ನಟಿಯರು ತಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳುವುದು ಮಾಮೂಲಿ. ಆದರೆ, ದುನಿಯಾ ವಿಜಯ್​ ಮಾತ್ರ ಸೆಲೆಬ್ರಿಟಿ ಎನ್ನುವ ಅಹಂ ಇಲ್ಲದೆ ಸಣ್ಣ ಗುಡಿಸಲಿನ ಹೋಟೆಲ್​ನಲ್ಲಿ ಉಪಹಾರ ಸೇವಿಸಿ ಸರಳತೆ ಮೆರೆದಿದ್ದಾರೆ. ಹೀಗಂತಾ ಹಿನ್ನೆಲೆ ಗಾಯಕ ನವೀನ್​ ಸಜ್ಜು ಹೇಳಿದ್ದಾರೆ.

ದುನಿಯಾ ವಿಜಯ್​, ಪತ್ನಿ ಕೀರ್ತಿ, ನವೀನ್​ ಸಜ್ಜು

ಸದ್ಯ ದುನಿಯಾ ವಿಜಿ ತಮ್ಮ ಸಲಗ ಚಿತ್ರವನ್ನು ತೆರೆಗೆ ತರುವ ಬ್ಯುಸಿಯಲ್ಲಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿದ್ದು, ಇದೇ ತಿಂಗಳಿನಲ್ಲಿ ಸಿನಿಮಾ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ ಸಲಗ ಚಿತ್ರಕ್ಕೆ ಯಶಸ್ಸು ಸಿಗಲೆಂದು ಪ್ರಾರ್ಥಿಸಿದ್ದಾರೆ.

ದುನಿಯಾ ವಿಜಯ್​, ಪತ್ನಿ ಕೀರ್ತಿ, ನವೀನ್​ ಸಜ್ಜು

ದೇವಸ್ಥಾನನಕ್ಕೆ ಹೋಗುವಾಗ ದುನಿಯಾ ವಿಜಯ್​ ಮತ್ತು ಚಿತ್ರತಂಡಕ್ಕೆ ಸಿಂಗರ್​ ನವೀನ್​ ಸಜ್ಜು ಕೂಡ ಸಾಥ್​ ನೀಡಿದ್ದಾರೆ. ದುನಿಯಾ ವಿಜಯ್ ಜೊತೆಗೆ ಕಳೆದ ಕ್ಷಣಗಳನ್ನು ಇನ್​ಸ್ಟಾಗ್ರಾಮ್​​ನಲ್ಲಿ ಬರೆದಿರುವ ನವೀನ್​ ಸಜ್ಜು, ಸರಳತೆಯ ಸಲಗ. ನಿನ್ನೆ ವಿಜಯಣ್ಣನೊಂದಿಗೆ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದೆ. ಬೆಟ್ಟಕ್ಕೆ ಹೋಗುವ ಮಾರ್ಗ ಮಧ್ಯೆ ಸಿಕ್ಕ ಈ ಪುಟ್ಟ ಗುಡಿಸಲು ಹೋಟೆಲ್​ಗೆ ಕರೆದೊಯ್ದ ವಿಜಿಯಣ್ಣ ಉಪಾಹಾರ ಕೊಡಿಸಿದ್ದರು. ಸ್ಟಾರ್, ಸಲೆಬ್ರಿಟಿ ಎಂಬ ಯಾವ ಅಹಂ ಇಲ್ಲದ ವಿಜಿಯಣ್ಣ ಇರುವುದೇ ಹೀಗೆ, ಬದುಕುತ್ತಿರುವುದು ಹೀಗೆ. ಹಿ ಈಸ್​ ಸೋ ಸಿಂಪಲ್​​. ನಿನ್ನೆಯ ಜರ್ನಿ ಅದ್ಭುತವಾಗಿತ್ತು. ಮುಂದಿನ ಸಲಗ ಜರ್ನಿ ಕೂಡ ಯಶಸ್ವಿಯಾಗಿ ಇರಲೆಂದು ಮಾದೇಶ್ವರನಲ್ಲಿ ಬೇಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಸಲಗ ಚಿತ್ರವನ್ನು ದುನಿಯಾ ವಿಜಯ್​ ನಿರ್ದೇಶಿಸಿ, ನಟಿಸಿದ್ದಾರೆ. ದೇವಸ್ಥಾನಕ್ಕೆ ಹೋಗುವಾಗ ವಿಜಯ್​ ಜೊತೆ ಪತ್ನಿ ಕೀರ್ತಿ ಕೂಡ ಜೊತೆಯಲ್ಲಿದ್ದರು.

ABOUT THE AUTHOR

...view details