ಕರ್ನಾಟಕ

karnataka

ETV Bharat / sitara

ಸಿನಿಮಾ ವಿತರಕ ಪಾಲ್ ಚಂದಾನಿ ಮನೆಯಲ್ಲಿ ಆವರಿಸಿದೆ ನೀರವ ಮೌನ

ಕನ್ನಡದ ಬಹಳಷ್ಟು ಸಿನಿಮಾಗಳನ್ನು ನಿರ್ಮಿಸಿ, ಹಂಚಿಕೆ ಮಾಡುತ್ತಿದ್ದ ಅಜಯ್ ಚಂದಾನಿ ಸೋಮವಾರ ಅಪಘಾತದಲ್ಲಿ ಮೃತಪಟ್ಟಿದ್ದು ಇದೀಗ ಅವರ ಮನೆಯಲ್ಲಿ ನೀರವ ಮೌನ ಆವರಿಸಿದೆ. ಅಜಯ್​​​​ ತಂದೆ ಪಾಲ್ ಚಂದಾನಿ ಕೂಡಾ ಹಂಚಿಕೆದಾರರಾಗಿದ್ದರು.

ಅಜಯ್​​​​ ಪಾಲ್ ಚಂದಾನಿ, ಪಾಲ್ ಚಂದಾನಿ

By

Published : Jul 17, 2019, 2:45 PM IST

ಕರ್ನಾಟಕದಲ್ಲಿ ಪರಭಾಷೆ, ಅದರಲ್ಲೂ ಹಿಂದಿ ಹಾಗೂ ಇಂಗ್ಲಿಷ್ ಸಿನಿಮಾಗಳ ವಿತರಣೆಯಲ್ಲಿ ಮುಂಚೂಣಿಯಲ್ಲಿದ್ದವರು ಮಾಂಡ್ರೆ ಪಿಕ್ಚರ್ಸ್ ಹಾಗೂ ಪಾಲ್ ಎಂಟರ್​​​ಪ್ರೈಸಸ್​​​​​. ಇವರಿಬ್ಬರ ಜೊತೆ ಬಾಷಾ ಬಾಹರ್ ಫಿಲಮ್ಸ್​​​​ ಸಂಸ್ಥೆ ಕೂಡಾ ಪೈಪೋಟಿ ನಡೆಸುತ್ತಾ ಇತ್ತು.

ಆದರೀಗ ಮಾಂಡ್ರೆ ಪಿಕ್ಚರ್ಸ್ ಕಾಣಿಸುತ್ತಿಲ್ಲ. ಇವರ ಜೊತೆಗೆ ವ್ಯಾಪಾರ ವಿತರಣೆ, ಫೈನಾನ್ಸ್ ನೀಡುವುದರ ಬಗ್ಗೆ ಅತಿ ಶಿಸ್ತಿನಿಂದ ವ್ಯಾಪಾರ ನಡೆಸುತ್ತಾ ಇದ್ದದ್ದು ಪಾಲ್ ಎಸ್ ಚಂದಾನಿ. ಕಳೆದ ವರ್ಷ ಪಾಲ್ ಚಂದಾನಿ ಕಾಲವಾದರು. 1965 ರಿಂದ ‘ಡೀಲ್ ವಿತ್ ರೈಟ್ ಪೀಪಲ್’ ಎಂದು ಪಾಲ್ ಚಂದಾನಿ ಫೇಮಸ್ ಆದವರು. ಇವರು ಸಾಕಷ್ಟು ಕನ್ನಡ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ’ಪ್ರವಾಸಿ ಮಂದಿರ’ ’ಅಪತ್ಪಾಂಧವ’, ’ಅನಂತನ ಅವಾಂತರ’, ’ಅಜಗಜಾಂತರ’ ಹಾಗೂ ಇನ್ನಿತರ ಸಿನಿಮಾಗಳನ್ನು ಅವರು ನಿರ್ಮಿಸಿದ್ದಾರೆ. ಹಿಂದಿಯಲ್ಲಿ ಗೋವಿಂದ ಅಭಿನಯದ ‘ಪ್ಯಾರ್ ಕರ್ ಕೆ ದೇಕೋ’ ಸೇರಿ ಸಾವಿರಕ್ಕೂ ಹೆಚ್ಚು ಹಿಂದಿ ಹಾಗೂ ಇಂಗ್ಲಿಷ್‌ ಸಿನಿಮಾಗಳ ವಿತರಣೆ ಇವರ ಪ್ರಮುಖ ವ್ಯಾಪಾರ ಆಗಿತ್ತು.

ಪತ್ನಿ, ಪುತ್ರಿ ಜೊತೆ ಅಜಯ್ ಚಂದಾನಿ

ಪಾಲ್ ಚಂದಾನಿ ಕಾಲವಾದ ನಂತರ ಅವರ ಮಗ ಅಜಯ್ ಚಂದಾನಿ ಈ ಉಸ್ತುವಾರಿ ವಹಿಸಿಕೊಂಡರು. ಆದರೆ ಭಾನುವಾರ ನಡೆದ ರಸ್ತೆ ಅಪಘಾತದಲ್ಲಿ ಅಜಯ್ ಪಾಲ್ ಚಂದಾನಿ ಕೂಡಾ ಮರಣ ಹೊಂದಿದರು. 48 ವರ್ಷದ ಅಜಯ್ ಚಂದಾನಿ ಭಾನುವಾರ ಸಂಜೆ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದೀಗ ವಿಂಡ್ಸರ್ ಮ್ಯಾನರ್ ಬಳಿಯ ಅಜಯ್ ಚಂದಾನಿ ನಿವಾಸದಲ್ಲಿ ಮೌನ ಆವರಿಸಿದೆ. ಗಾಂಧಿನಗರದಲ್ಲಿ ರಹೆಜಾ ಟವರ್ ಆಫೀಸಿನಲ್ಲೂ ಇದೇ ಪರಿಸ್ಥಿತಿ. ಕಿಚ್ಚ ಸುದೀಪ್ ಹಾಗೂ ಇನ್ನಿತರರು ಅಜಯ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಚಂದಾನಿ ನೆಚ್ಚಿನ ಸ್ನೇಹಿತ ಲಹರಿ ವೇಲು ಮಾತನಾಡುತ್ತಾ 'ಅಜಯ್ ಮುದ್ದಾದ ಹುಡುಗ. ಸಾಯುವ ವಯಸ್ಸು ಅಲ್ಲವೇ ಅಲ್ಲ. ಅವನಿಗೆ ಮೊದಲಿನಿಂದಲೂ ಬೈಕ್ ಅಂದರೆ ಹುಚ್ಚು. ಯಾವುದೇ ಹೊಸ ವಾಹನ ನೋಡಿದರೆ ಏರಿ ಬಿಡುತ್ತಿದ್ದ. ಆದರೆ ಈ ಬಾರಿ ವಾಪಸ್​​ ಬರದ ಹಾಗೆ ಹೋಗಿದ್ದಾನೆ. ಅವನ ಮನೆಯಲ್ಲಿ ಅಮ್ಮನಿಗೆ ಮರೆವಿನ ಕಾಯಿಲೆ ಇದೆ. ಮಗನಿಗೆ ಏನಾಗಿದೆ ಎಂಬುದೇ ಅವರಿಗೆ ಗೊತ್ತಿಲ್ಲ. ಅಜಯ್​​ಗೆ ಪತ್ನಿ ಹಾಗೂ ಪಿಯುಸಿ ಓದುತ್ತಿರುವ ಮಗಳಿದ್ದಾಳೆ. ಮುಂದೆ ಹೇಗೆ ಎಂಬ ಪರಿಸ್ಥಿತಿ ಅವರ ಮನೆಯಲ್ಲಿ ಎದುರಾಗಿದೆ.

ಕಳೆದ ಗುರುವಾರ ‘ಯಾನ’ ಸಿನಿಮಾವನ್ನು ನೋಡಲು ಅಜಯ್ ಚಂದಾನಿ ಬಂದಿದ್ದರು. ನಂತರ ಅವರ ಸಾವಿನ ಸುದ್ದಿ ಕೇಳಿ ಏನು ಹೇಳಬೇಕು ತಿಳಿಯುತ್ತಿಲ್ಲ. ನನ್ನ ಕೈಯ್ಯಲ್ಲಿ ಆದಷ್ಟು ನನ್ನ ಸ್ನೇಹಿತನ ಕುಟುಂಬಕ್ಕೆ ಬೇಕಾದ ನೆರವು ನೀಡಬೇಕು ಅಷ್ಟೇ ಎಂದು ಲಹರಿ ವೇಲು ಸ್ನೇಹಿತನನ್ನು ನೆನಪಿಸಿಕೊಂಡು ಭಾವುಕರಾದರು. ಹಿರಿಯ ನಿರ್ದೇಶಕ ಎಸ್​.ವಿ. ರಾಜೇಂದ್ರ ಸಿಂಗ್ ಬಾಬು ಕುಟುಂಬಕ್ಕೂ ಅಜಯ್ ಚಂದಾನಿ ಬಹಳ ಆತ್ಮೀಯರಾಗಿದ್ದರು.

For All Latest Updates

TAGGED:

ABOUT THE AUTHOR

...view details