ನಮ್ಮ ಮಾತೃ ಭಾಷೆ ತೆಲುಗು ಆದರೂ ನಮ್ಮ ಜೀವನದ ಭಾಷೆ ಕನ್ನಡ. ಕನ್ನಡಿಗರ ಆಶೀರ್ವಾದದಿಂದ ನಾವು ಈ ಮಟ್ಟಕ್ಕೆ ಬೆಳೆದಿದ್ದೇವೆ ಎಂದು ಡೈಲಾಗ್ ಕಿಂಗ್ ಸಾಯಿಕುಮಾರ್ ಹೇಳಿದರು. ಭರಾಟೆ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಸಾಯಿಕುಮಾರ್, ನಾನು ಕನ್ನಡ ಇಂಡಸ್ಟ್ರಿಗೆ ಬಂದು ಈಗಾಗಲೇ 25 ವರ್ಷ ತುಂಬಿದೆ. ಕುಂಕುಮ ಭಾಗ್ಯ ಸಿನಿಮಾದ ಮೂಲಕ ಕನ್ನಡದಲ್ಲಿ ನನ್ನ ಸಿನಿ ಜರ್ನಿ ಶುರುವಾಗಿ ಇಂದು ಭರಾಟೆ ಸಿನಿಮಾದವರೆಗೂ ತಲುಪಿದೆ.
ನಮ್ಮ ಇಡೀ ಕುಟುಂಬಕ್ಕೆ ಸಿನಿಮಾ ರಂಗದ ನಂಟು ಇದೆ. ನನ್ನ ತಾಯಿ ಡಾ. ರಾಜ್‌ಕುಮಾರ್ ಸೇರಿದಂತೆ ಹಲವು ನಟರ ಜೊತೆ ನಟಿಸಿದ್ದಾರೆ. ಅಲ್ಲದೆ ನನ್ನ ತಂದೆ ಹಲವು ನಟರ ಸಿನಿಮಾಗಳಿಗೆ ಕಂಠದಾನ ಮಾಡಿದ್ದಾರೆ. ನಮಗೆ ನಮ್ಮ ತಂದೆ-ತಾಯಿಯೇ ಸ್ಫೂರ್ತಿ. ನಾವು ಸಹೋದರರು ಮೂರು ಜನ ಕನ್ನಡ ಸಿನಿಮಾಗಳಲ್ಲಿ ನಟಿಸಿರೋದು ತುಂಬಾನೇ ಖುಷಿ ಇದೆ.