2019ರ ಸೈಮಾ ಪ್ರಶಸ್ತಿ ಕಾರ್ಯಕ್ರಮ ಎರಡು ದಿನಗಳ ಕಾಲ ಕತಾರ್ನಲ್ಲಿ ನಡೆಯುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ.
ಸೈಮಾ ಅತ್ಯುತ್ತಮ ಖಳನಟ ಪ್ರಶಸ್ತಿ ಪಡೆದ ಡಾಲಿ - ಸ್ಯಾಂಡಲ್ವುಡ್ ನಟ ಧನಂಜಯ್
ಸ್ಯಾಂಡಲ್ವುಡ್ ನಟ ಧನಂಜಯ್ 2019ರ ಸಾಲಿನ ಕನ್ನಡದ ಅತ್ಯುತ್ತಮ ಖಳನಟ ಸೈಮಾ ಅವಾರ್ಡ್ ಪಡೆದಿದ್ದಾರೆ. ಟಗರು ಚಿತ್ರದಲ್ಲಿ ಧನಂಜಯ್ ನಟಿಸಿದ್ದ ನೆಗೆಟಿವ್ ರೋಲ್ಗೆ ಪ್ರಶಸ್ತಿ ಒಲಿದಿದೆ.
ಸ್ಯಾಂಡಲ್ವುಡ್ ನಟ ಧನಂಜಯ್ 2019ರ ಸಾಲಿನ ಕನ್ನಡದ ಅತ್ಯುತ್ತಮ ಖಳನಟ ಸೈಮಾ ಅವಾರ್ಡ್ ಪಡೆದಿದ್ದಾರೆ. ಟಗರು ಚಿತ್ರದಲ್ಲಿ ಧನಂಜಯ್ ನಟಿಸಿದ್ದ ನೆಗೆಟಿವ್ ರೋಲ್ಗೆ ಪ್ರಶಸ್ತಿ ಒಲಿದಿದೆ.
ಸುಕ್ಕಾ ಸೂರಿ ನಿರ್ದೇಶನ ಹಾಗೂ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ನಟಿಸಿದ್ದ ಟಗರು ಚಿತ್ರ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಧನಂಜಯ್ ಡಾಲಿ ಪಾತ್ರದಲ್ಲಿ ಮಿಂಚಿದ್ದರು. ಈ ಚಿತ್ರದ ಬಳಿಕ ಡಾಲಿ ಧನಂಜಯ್ ಅಂತಾನೇ ಫೇಮಸ್ ಆಗಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾ ಬಳಿಕ ಪರಭಾಷೆಗಳಿಂದಲೂ ಆಫರ್ ಬಂದು, ಬಹುಭಾಷಾ ಭೈರವಗೀತಾ ಸಿನಿಮಾದಲ್ಲಿ ಇವರು ನಟಿಸುವಂತಾಯಿತು. ಇಷ್ಟೊಂದು ನೇಮು-ಫೇಮು ತಂದುಕೊಟ್ಟಿದ್ದ ಡಾಲಿ ಪಾತ್ರಕ್ಕೆ ಇದೀಗ ಸೈಮಾ ಅವಾರ್ಡ್ ಕೂಡ ಒಲಿದು ಬಂದಿದೆ.