ದೇಶದೆಲ್ಲೆಡೆ ಕೊರೊನಾ ಎಂಬ ಹೆಮ್ಮಾರಿಗೆ ಜನರು ತತ್ತರಸಿ ಹೋಗಿದ್ದಾರೆ. ರಾಜ್ಯ, ನಗರ ಹಾಗೂ ಹಳ್ಳಿಗಳ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಇಲ್ಲದ ಸಾಕಷ್ಟು ಜನ ಈ ಹೆಮ್ಮಾರಿಗೆ ಪ್ರಾಣ ಬೀಡುತ್ತಿದ್ದಾರೆ. ಈ ಬಗ್ಗೆ ಹಿರಿಯ ನಟ ಸಿಹಿಕಹಿ ಚಂದ್ರು ಆತಂಕ ವ್ಯಕ್ತಪಡಿಸಿದ್ದಾರೆ.
ಕೊರೊನಾ ಎಂಬ ವೈರಸ್ನಿಂದ ನಮ್ಮ ಪ್ರೀತಿ ಪಾತ್ರರನ್ನ ಕಳೆದುಕೊಳ್ಳುತ್ತಿದ್ದೇವೆ ಅಂತ ಬೇಸರವನ್ನ ವ್ಯಕ್ತಪಡಿಸಿರುವ ಅವರು, ಇದೆಕ್ಕೆಲ್ಲಾ ಕಾರಣ ನಾವುಗಳೇ. ಯಾಕೆಂದರೆ, ಪ್ರಕೃತಿಯ ಸಿಟ್ಟಿನಿಂದ ಉದ್ಭವಿಸಿರೋ ರೋಗವೇ ಕೊರೊನಾ ಅಂತ ಅವರು ಅಭಿಪ್ರಾಯ ಪಟ್ಟಿದ್ದಾರೆ.