ಸೆಲಬ್ರಿಟಿಗಳ ಜೀವನ ಅಂದ್ರೆ ಯಾವಾಗಲೂ ಕಲರ್ಫುಲ್ ಆಗಿರುತ್ತದೆ. ಯಾವುದಾದರೂ ಸಭೆ, ಸಮಾರಂಭ ಎಂದರೆ ಸಾಕು ಸೆಲಬ್ರಿಟಿಗಳು ಎಂದಿಗಿಂತ ಸಖತ್ ಮಿಂಚುತ್ತಾರೆ. ಅಲ್ಲದೆ ಅವರ ಯೋಚನೆಗಳು ಕೂಡಾ ಬಹಳ ವಿಭಿನ್ನವಾಗಿರುತ್ತದೆ.
ಮಗಳ ಹುಟ್ಟುಹಬ್ಬದಂದು ಕಲರ್ಫುಲ್ ಫೋಟೋಶೂಟ್ ಮಾಡಿಸಿದ ಸಿಂಪಲ್ ಸುಂದರಿ - Ashmita Srivatsav 3rd birthday
ಸಿಂಪಲ್ ಸುಂದರಿ ಶ್ವೇತಾ ಶ್ರೀವಾತ್ಸವ್ಗೆ ಇಂದು ವಿಶೇಷವಾದ ದಿನ. ಇಂದು ಶ್ವೇತಾ ಪುತ್ರಿ ಅಶ್ಮಿತಾ ಮೂರನೇ ವರ್ಷದ ಹುಟ್ಟುಹಬ್ಬವಾಗಿದ್ದು ಮಗಳ ಫ್ರಾಕ್ಗೆ ಮ್ಯಾಚ್ ಆಗುವ ಸೀರೆ ಧರಿಸಿ ಸಖತ್ ಫೋಟೋಶೂಟ್ ಮಾಡಿಸಿ ಮಿಂಚಿದ್ದಾರೆ.

ಏನೇ ಕೆಲಸ ಮಾಡಿದರೂ ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಮುನ್ನುಗ್ಗುವ ಸೆಲಬ್ರಿಟಿಗಳು ಲಾಕ್ ಡೌನ್ನಲ್ಲಿ ಕೂಡಾ ಸುಮ್ಮನೆ ಕೂರುವ ಜಾಯಮಾನದವರಲ್ಲ. ಅದೇ ಪಟ್ಟಿಗೆ ಸಿಂಪಲ್ ಸುಂದ್ರಿ ಶ್ವೇತಾ ಶ್ರೀವಾತ್ಸವ್ ಕೂಡಾ ಸೇರುತ್ತಾರೆ. ಸದಾ ಆ್ಯಕ್ಟಿವ್ ಆಗಿರಲು ಶ್ವೇತಾ ಏನಾದರೂ ಕೆಲಸ ಮಾಡುತ್ತಿರುತ್ತಾರೆ. ಇಂದು ಈ ಸಿಂಪಲ್ ಸುಂದರಿಯ ಮುದ್ದು ಮಗಳ ಮೂರನೇ ವರ್ಷದ ಹುಟ್ಟುಹಬ್ಬ.
ಮಗಳು ಅಶ್ಮಿತಾ ಶ್ರೀವಾತ್ಸವ್ ಹುಟ್ಟುಹಬ್ಬಕ್ಕೆ ಶ್ವೇತಾ ಸ್ಪೆಷಲ್ ಫೋಟೋಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಮಗಳ ಬರ್ತ್ಡೇ ಹತ್ತಿರ ಬರುತ್ತಿದ್ದಂತೆ ಎಲ್ಲಾ ಪ್ಲ್ಯಾನ್ ಮಾಡಿದ್ದಾರೆ. ಹುಟ್ಟುಹಬ್ಬ ಬಹಳ ಸಿಂಪಲ್ ಆಗಿದ್ದರೂ ಶ್ವೇತಾ ತನ್ನ ಮಗಳೊಂದಿಗೆ ಮಿಂಚಿದ್ದಾರೆ. ಮಗಳ ಡ್ರೆಸ್, ತನ್ನ ಡ್ರೆಸ್ ಮ್ಯಾಚ್ ಆಗುವಂತೆ ಮೊದಲೇ ಪ್ಲ್ಯಾನ್ ಮಾಡಿ ಶ್ವೇತಾ ಫೋಟೋಶೂಟ್ ಮಾಡಿಸಿ ಮಗಳ ಹುಟ್ಟುಹಬ್ಬವನ್ನು ಎಂಜಾಯ್ ಮಾಡಿದ್ದಾರೆ.