ಕೊನೆ ಘಳಿಗೆಯಲ್ಲಿ ಕೆಲವೊಂದು ವೈಯಕ್ತಿಕ ಕಾರಣಗಳಿಂದ ಬಿಗ್ಬಾಸ್ ಕಾರ್ಯಕ್ರಮದಿಂದ ದೂರ ಉಳಿದಿದ್ದ ನಟಿ ಶ್ವೇತಾಪ್ರಸಾದ್ ನಿನ್ನೆ ತಮ್ಮ 7ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಹೌದು, ಶ್ವೇತಾ ಪ್ರಸಾದ್ ಹಾಗೂ ರೆಡಿಯೋ ಜಾಕಿ ಪ್ರದೀಪ್ ದಾಂಪತ್ಯಕ್ಕೆ 7 ವರ್ಷಗಳು ತುಂಬಿವೆ.
7ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ರಾಧಾ ಮಿಸ್.. - ರೆಡಿಯೋ ಜಾಕಿ ಪ್ರದೀಪ್ 7ನೇ ವಿವಾಹ ವಾರ್ಷಿಕೋತ್ಸವ
ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ಶ್ವೇತಾ ಪ್ರಸಾದ್ ಹಾಗೂ ಪ್ರದೀಪ್ ಸ್ನೇಹಿತರಾಗಿದ್ದು ಕೆಲವು ದಿನಗಳ ನಂತರ ಅವರ ಸ್ನೇಹ ಪ್ರೀತಿಗೆ ತಿರುಗಿದೆ. ತಡ ಮಾಡದೆ ಇಬ್ಬರೂ ಹಿರಿಯರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಇದೀಗ ಏಳನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ದಂಪತಿ ಆಚರಿಸಿಕೊಂಡಿದೆ.
ಈ ಜೋಡಿ 2012 ಅಕ್ಟೋಬರ್ 14 ರಂದು ಸತಿ-ಪತಿಗಳಾಗಿದ್ದರು. 'ರಾಧಾರಮಣ' ಧಾರಾವಾಹಿ ಮೂಲಕ ಶ್ವೇತಾ, ರಾಧಾ ಮಿಸ್ ಆಗಿ ರಾಜ್ಯಕ್ಕೆ ಪರಿಚಿತರಾಗಿದ್ದರೆ, ಪತಿ ಪ್ರದೀಪ್ ರೆಡಿಯೋ ಜಾಕಿ ಆಗಿ ಕನ್ನಡಿಗರಿಗೆ ಪರಿಚಿತ. ಇವರಿಬ್ಬರದ್ದು ಪ್ರೇಮ ವಿವಾಹ. ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ಶ್ವೇತಾ ಹಾಗೂ ಪ್ರದೀಪ್ ಸ್ನೇಹ ಪ್ರೀತಿಗೆ ತಿರುಗಿದೆ. ಮುಂದೆ ತಡ ಮಾಡದೆ ಇಬ್ಬರೂ ಮನೆಯವರ ಒಪ್ಪಿಗೆ ಪಡೆದು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಜಾಹ್ನವಿ ಆಗಿ ಬಣ್ಣದ ಪಯಣ ಆರಂಭಿಸಿದ ಶ್ವೇತಾ, 'ಕಳ್ಬೆಟ್ಟದ ದರೋಡೆಕೋರರು' ಸಿನಿಮಾ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟರು. ಆದರೆ, ಇಂದಿಗೂ ಅವರು ರಾಧಾ ಮಿಸ್ ಎಂದೇ ಪರಿಚಿತ. ಇನ್ನು, ಆರ್ಜೆ ಪ್ರದೀಪ್ ತಮ್ಮ ಸಖತ್ ಸ್ಟುಡಿಯೋ ಅಡಿಯಲ್ಲಿ ವೆಬ್ ಸೀರೀಸ್ಗಳನ್ನು ತಯಾರಿಸುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಸದ್ಯಕ್ಕೆ ಪತಿ-ಪತ್ನಿ ಇಬ್ಬರೂ ಬಣ್ಣದ ಲೋಕದಲ್ಲಿ ಫುಲ್ ಬ್ಯುಸಿ. ಇಬ್ಬರ ವೈವಾಹಿಕ ಜೀವನ ಮತ್ತಷ್ಟು ಸಂತೋಷಮಯವಾಗಿರಲಿ ಎಂದು ಹಾರೈಸೋಣ.