ಕರ್ನಾಟಕ

karnataka

ETV Bharat / sitara

ಟಿವಿಯಲ್ಲಿ ಅಮ್ಮನ ನೋಡಿ ಕುಣಿದಾಡಿದ ಶ್ವೇತಾ ಚಂಗಪ್ಪ ಪುತ್ರ - ಶ್ವೇತಾ ಚಂಗಪ್ಪ ಸುದ್ದಿ

ಶ್ವೇತಾ ಚಂಗಪ್ಪ ಮಗ ಜಿಯಾನ್ ಟಿವಿಯಲ್ಲಿ ಅಮ್ಮನನ್ನು ಕಂಡು ಸಂತಸದಿಂದ ಕುಣಿದಾಡಿದ್ದಾನೆ. ಹೌದು, ಮಜಾ ಟಾಕೀಸ್​​ನ ಇತ್ತೀಚಿನ ಸಂಚಿಕೆಯನ್ನು ಟಿವಿಯಲ್ಲಿ ನೋಡಿದ ಬಾಲಕ ಅಮ್ಮನನ್ನು ಗುರುತಿಸಿ ಚಪ್ಪಾಳೆ ತಟ್ಟಿದನಂತೆ.

shwetha chengappa recognize him mother in TV
ಟಿವಿಯಲ್ಲಿ ಅಮ್ಮನನ್ನು ನೋಡಿ ಕುಣಿದಾಡಿದ ಶ್ವೇತಾ ಚಂಗಪ್ಪ ಪುತ್ರ

By

Published : Dec 23, 2020, 4:35 PM IST

ಶ್ವೇತಾ ಚಂಗಪ್ಪ ಕಿರುತೆರೆ ಜೊತೆಗೆ ಹಿರಿತೆರೆ ವೀಕ್ಷಕರಿಗೂ ತೀರಾ ಪರಿಚಿತ ಹೆಸರು. ಒಂದಷ್ಟು ಧಾರಾವಾಹಿಗಳ ಜೊತೆಗೆ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿರುವ ಶ್ವೇತಾ ಮನೆ ಮತಾಗಿದ್ದು ಮಜಾ ಟಾಕೀಸ್ ಮೂಲಕ. ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಕಾರ್ಯಕ್ರಮದಲ್ಲಿ ರಾಣಿಯಾಗಿ ಕಾಣಿಸಿಕೊಳ್ಳುವ ಮೂಲಕ ಕರ್ನಾಟಕದಾದ್ಯಂತ ಮನೆ ಮಾತಾದ ಶ್ವೇತಾ, ಒಂದೂವರೆ ವರ್ಷಗಳ ನಂತರ ಮರಳಿ ಬಣ್ಣ ಹಚ್ಚಲಾರಂಭಿಸಿದ್ದಾರೆ.

ಶ್ವೇತಾ ಚಂಗಪ್ಪ

ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿದ್ದ ಶ್ವೇತಾ ಮಗ ಜಿಯಾನ್ ಅಯ್ಯಪ್ಪನ ಲಾಲನೆ-ಪಾಲನೆ ಸಲುವಾಗಿ ಬಣ್ಣದ ಲೋಕಕ್ಕೆ ಕೊಂಚ ವಿರಾಮ ಹೇಳಿದ್ದರು. ಅದೇ ಕಾರಣದಿಂದ ಮಜಾ ಟಾಕೀಸ್ ಹೊಸ ಸೀಸನ್‌ನ ಆರಂಭದಲ್ಲಿ ಶ್ವೇತಾ ಕಾಣಿಸಿಕೊಂಡಿರಲಿಲ್ಲ. ಇದೀಗ ಶ್ವೇತಾ, ರಾಣಿಯಾಗಿ ಕಿರುತೆರೆಗೆ ಮರಳಿರುವ ವಿಚಾರ ವೀಕ್ಷಕರಿಗೂ ತಿಳಿದೇ ಇದೆ.

ಪುತ್ರನೊಂದಿಗೆ ಶ್ವೇತಾ ಚಂಗಪ್ಪ

ಓದಿ: ರೈತರು ಹೃದಯ, ಆತ್ಮವನ್ನು ಮಣ್ಣಿನಲ್ಲಿರಿಸಿ ನಮಗೆ ಆಹಾರ ಕೊಡ್ತಾರೆ: ನಟ ದರ್ಶನ್

ಕುತೂಹಲದ ವಿಚಾರವೆಂದರೆ, ಶ್ವೇತಾ ಮಗ ಜಿಯಾನ್ ಟಿವಿಯಲ್ಲಿ ಅಮ್ಮನನ್ನು ಕಂಡು ಸಂತಸದಿಂದ ಕುಣಿದಾಡಿದ್ದಾನೆ. ಮಜಾ ಟಾಕೀಸ್​​ನ ಇತ್ತೀಚಿನ ಸಂಚಿಕೆಯನ್ನು ಟಿವಿಯಲ್ಲಿ ನೋಡಿದ ಪುತ್ರ ಅಮ್ಮನನ್ನು ಟಿವಿಯಲ್ಲಿ ನೋಡಿ ಗುರುತಿಸಿದ್ದಾನೆ.

ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಶ್ವೇತಾ ಚೆಂಗಪ್ಪ, "ಮಗ ನನ್ನನ್ನು ಟಿವಿ ಸ್ಕ್ರೀನ್ ನಲ್ಲಿ ನೋಡಿ ಆ ಪಾತ್ರದಲ್ಲಿ ನನ್ನನ್ನು ಗುರುತು ಹಿಡಿದು ಚಪ್ಪಾಳೆ ತಟ್ಟಿದ್ದಾನೆ. ಇದು ನನ್ನ ಜೀವನದ ಮಧುರ ಕ್ಷಣ" ಎಂದು ಬರೆದುಕೊಂಡಿದ್ದಾರೆ.

ಪುತ್ರನೊಂದಿಗೆ ಶ್ವೇತಾ ಚಂಗಪ್ಪ

ABOUT THE AUTHOR

...view details