ಕರ್ನಾಟಕ

karnataka

ETV Bharat / sitara

ಸೋಶಿಯಲ್‌ ಮೀಡಿಯಾದಲ್ಲೀಗ ಮಹಿಳೆಯರಿಗೆ ಶ್ವೇತಾ ಚೆಂಗಪ್ಪ ಸ್ಫೂರ್ತಿ..

ಲಾಕ್‌ಡೌನ್ ಸಮಯದಲ್ಲಿ ತಮ್ಮ ಸಮಯವನ್ನೆಲ್ಲಾ ಮಗನ ಲಾಲನೆ ಪಾಲನೆಗಾಗಿ ಮೀಸಲಿಟ್ಟಿರುವ ಶ್ವೇತಾ, ಸಮಯ ಸಿಕ್ಕಾಗಲೆಲ್ಲಾ ಮಗನೊಂದಿಗೆ ತೆಗೆದ ಫೋಟೋ, ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ ಅಪ್‌ಲೋಡ್ ಮಾಡುತ್ತಿರುತ್ತಾರೆ..

Shwetha chengappa
Shwetha chengappa

By

Published : Jul 8, 2020, 6:27 PM IST

ಮಜಾ ಟಾಕೀಸ್ ರಾಣಿಯಾಗಿ ಕನ್ನಡ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಕೊಡಗಿನ ಕುವರಿ ಶ್ವೇತಾ ಚೆಂಗಪ್ಪ ಅವರು ಸದ್ಯ ಬಣ್ಣದ ಲೋಕದಿಂದ ದೂರವಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರಿಗೆ ಸ್ಫೂರ್ತಿ ತುಂಬುವ ಮೂಲಕ ಜನರ ಮನೆ ಮಾತಾಗಿದ್ದಾರೆ.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿರುವ ಶ್ವೇತಾ ಮಗನೊಂದಿಗೆ ಸಮಯ ಕಳೆಯುತ್ತಿದ್ದಾರೆ. ತಾಯ್ತನವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಕೊಡಗಿನ ಶ್ವೇತಾ ಚಂಗಪ್ಪ ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಮಹಿಳೆಯರಿಗೆ ಸ್ಫೂರ್ತಿ ತುಂಬುವ ಸಂದೇಶ ನೀಡಿದ್ದಾರೆ.

"ತೂಕವನ್ನು ಹೆಚ್ಚಿಸಿಕೊಳ್ಳಲು ಸೆಣಸಾಡುವ ಮಹಿಳೆಯರಿದ್ದೀರೋ ಹಾಗೂ ಯಾರೆಲ್ಲಾ ತೂಕವನ್ನು ಕಮ್ಮಿ ಮಾಡಿಕೊಳ್ಳಲು ಹೆಣಗಾಡುವ ಮಹಿಳೆಯರಿದ್ದೀರೋ ಅವರೆಲ್ಲರೂ ಸುಂದರವೇ.. ನಿಮಗಿಲ್ಲಿ ಯಾರು ಸುಂದರ ಎಂದು ಗೊತ್ತಿದೆಯಾ? ತಮ್ಮನ್ನು ತಾವು ಯಾರು ಪ್ರೀತಿಸಲು ಕಲಿಯುತ್ತಾರೋ ಅವರೇ ಸುಂದರ. ಬೇರೆಯವರಿಗಾಗಿ ನೀವು ಬದಲಾಗುವ ಅವಶ್ಯಕತೆ ಇಲ್ಲ ಎಂದಿರುವ ಶ್ವೇತಾ, ನಮ್ಮನ್ನು ನಾವು ಪ್ರೀತಿಸುವುದೇ ಸಂತೋಷದ ಮೊದಲ ರಹಸ್ಯ" ಎಂದು ಹೇಳುವ ಮೂಲಕ ಬದುಕಿನಲ್ಲಿ ಹೇಗಿರಬೇಕೆಂಬ ಪಾಠ ಹೇಳಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ತಮ್ಮ ಸಮಯವನ್ನೆಲ್ಲಾ ಮಗನ ಲಾಲನೆ ಪಾಲನೆಗಾಗಿ ಮೀಸಲಿಟ್ಟಿರುವ ಶ್ವೇತಾ, ಸಮಯ ಸಿಕ್ಕಾಗಲೆಲ್ಲಾ ಮಗನೊಂದಿಗೆ ತೆಗೆದ ಫೋಟೋ, ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ ಅಪ್‌ಲೋಡ್ ಮಾಡುತ್ತಿರುತ್ತಾರೆ.

ABOUT THE AUTHOR

...view details