ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡಿರುವ ನಟಿ ಶ್ವೇತಾ ಶ್ರೀವಾತ್ಸವ್, ಸದ್ಯ ಫ್ಯಾಮಿಲಿ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ತಮ್ಮ ಮುದ್ದಿನ ಮಗಳು ಅಶ್ಮಿತಾ ಜೊತೆ ಹೆಚ್ಚು ಸಮಯ ವಿನಿಯೋಗಿಸುತ್ತಿದ್ದಾರೆ. ಈಗ ಅದೇ ವಿಷಯಕ್ಕೆ ಸುದ್ದಿಯಾಗಿದ್ದಾರೆ.
ಹುಟ್ಟುಹಬ್ಬದ ಕಾರಣಕ್ಕೆ ಸಿಂಪಲ್ ಬೆಡಗಿ ಶ್ವೇತಾ, ಮಗಳು ಅಶ್ಮಿತಾ ಹಾಗೂ ಪತಿ ಜೊತೆ ಪಾಂಡಿಚೇರಿ ಟ್ರಿಪ್ ಮಾಡಿದ್ದಾರೆ. ಅಲ್ಲಿ ಎರಡು ದಿನಗಳ ಕಾಲ ಕುಟುಂಬದ ಜೊತೆ ಸಖತ್ ಎಂಜಾಯ್ ಮಾಡಿದ್ದಾರೆ. ಕಡಲ ತೀರದಲ್ಲಿ ಮಗಳ ಜೊತೆ ಸಖತ್ ಬೈಕ್ ರೈಡ್ ಮಾಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಇತ್ತೀಚೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಯಶೋಧಾಕೃಷ್ಣನ ವೇಷ ಭೂಷಣ ತೊಟ್ಟು ಮುದ್ದಾದ ಮಗುವಿನ ಜೊತೆ ಫೋಟೋ ಶೂಟ್ ಮಾಡಿಸಿದ್ರು. ಸದ್ಯ ಅವರು ಕೆಎಎಸ್ ಅಧಿಕಾರಿ ಪಾತ್ರದಲ್ಲಿ ನಟಿಸಿರುವ ಹೋಪ್ ಸಿನಿಮಾದ ಚಿತ್ರೀಕರಣ ಮುಗಿದಿದೆ. ಚಿತ್ರತಂಡ ಇತ್ತೀಚೆಗೆ ಮೇಕಿಂಗ್ ವಿಡಿಯೋ ರಿವೀಲ್ ಮಾಡಿತ್ತು.