ಬೆಂಗಳೂರು ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರ 25 ನೇ ಪುಸ್ತಕ ‘ಶುಭಂ’ ಮೊದಲ ಪ್ರತಿಯನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು.
ಶುಭಂ ಪುಸ್ತಕ ಬಿಡುಗಡೆ ಸಮಾರಂಭ ನಂತರ ಮಾತನಾಡಿದ ಅವರು ಪ್ರತಿಯೊಬ್ಬ ವ್ಯಕ್ತಿಯ ಜೀವನ ಪುಸ್ತಕ ರೂಪದಲ್ಲಿ ದಾಖಲಾಗುವಂತೆ ಆಗಲಿ. ಗಣೇಶ್ ಕಾಸರಗೋಡು ಬರೆದಿರುವ ಪುಸ್ತಕದಲ್ಲಿ ಸಿನಿಮಾ ಪ್ರಪಂಚವೆ ಅಡಗಿದೆ ಎಂದು ಕೇಳಿದ್ದೇನೆ. ಅವರಿಗೆ ಬಹಳ ತಾಳ್ಮೆಯಿದ್ದರಿಂದ ಈ ರೀತಿಯ ದೊಡ್ಡ ಪುಸ್ತಕ ಬರೆಯಲು ಸಾಧ್ಯವಾಯಿತು. ಒಂದು ಕೈಯಲ್ಲಿ ‘ಶುಭಂ’ ಹಿಡಿದರೆ ಜಿಮ್ಮಿಗೆ ಹೋಗಬೇಕಿಲ್ಲ. ನನಗಂತೂ ಓದುವ ತಾಳ್ಮೆ ಇಲ್ಲ ಎಂದು ಮೊದಲ ಪ್ರತಿಯನ್ನು ಕಿಚ್ಚ ಸುದೀಪ್ ದೊಡ್ಡು ಕೊಟ್ಟು ಖರೀದಿ ಮಾಡಿದರು.
ಪತ್ರಕರ್ತ ರವಿ ಬೆಳೆಗೆರೆ ಮಾತನಾಡಿ ನಾನು ಬೆಂಗಳೂರಿನಲ್ಲಿ ಏನಾದರೂ ಅಗಿದ್ದೇನೆ ಅಂದರೆ ಗಣೇಶ್ ಕಾಸರಗೋಡು ಕಾರಣ. ಅವರನ್ನು ದಶಕಗಳಿಂದ ಬಲ್ಲೆ. ಅವರ ಕೋಪ ಸಹ ನನಗೆ ಚೆನ್ನಾಗಿ ಪರಿಚಯವಿದೆ. ನಾನು ಮುಂದಿನ ದಿನಗಳಲ್ಲಿ ಗಣೇಶ್ ಕಾಸರಗೋಡು ಬಗ್ಗೆಯೇ ಪುಸ್ತಕ ಬರೆಯುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರವಿ ಬೆಳೆಗೆರೆ, ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ತಾರಾ, ಶ್ರಾವಣ ಲಕ್ಷ್ಮಣ್ , ಹಿರಿಯ ನಿರ್ದೇಶಕರುಗಳಾದ ಎಸ್ ಕೆ ಭಾಗ್ವನ್ (ದೊರೈ ಭಾಗ್ವನ್ ಖ್ಯಾತಿ), ಸಿ ವಿ ಶಿವಶಂಕರ್, ಭಾರ್ಗವ, ಪದ್ಮಶ್ರೀ ದೊಡ್ಡ ರಂಗೆ ಗೌಡ, ವಾಣಿಜ್ಯ ಮಂಡಲಿ ಅಧ್ಯಕ್ಷ ಜಯರಾಜ್, ಸಾ ರಾ ಗೋವಿಂದು, ನಿರ್ಮಾಪಕ ಜ್ಯಾಕ್ ಮಂಜುನಾಥ್, ಡಿಂಗ್ರಿ ನಾಗರಾಜ್, ಸುಂದರ್ ರಾಜ್, ಟೆನ್ನಿಸ್ ಕೃಷ್ಣ, ಕೆ ಪಿ ನಂಜುಂಡಿ ಹಾಗೂ ಇನ್ನಿತರರು ಹಾಹರಿದ್ದರು.
‘ಶುಭಂ’ ಪುಸ್ತಕ ಅಮ್ಮ ಪ್ರಕಾಶನದಲ್ಲಿ ಹೊರಬಂದಿದ್ದು, ಗಣೇಶ್ ಕಾಸರಗೋಡು ಅವರ 40 ವರ್ಷಗಳ ಸಿನಿಮಾ ಸಹವಾಸ, ಪತ್ರಕರ್ತನಾಗಿ 900 ಪುಟಗಳಲ್ಲಿ ಮೂಡಿಬಂದಿದೆ.