ಕೊರೊನಾ ವೈರಸ್ ದಾಳಿಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಮಾಲ್, ಥಿಯೇಟರ್ಗಳೆಲ್ಲಾ ಬಂದ್ ಆಗಿವೆ. ಜೊತೆಗೆ ಕನ್ನಡ ಚಿತ್ರರಂಗಕ್ಕೆ ಕೂಡಾ ಕೊರೊನಾ ಎಫೆಕ್ಟ್ ತಟ್ಟಿದೆ. ಒಂದೇ ವಾರದಲ್ಲಿ ಕನ್ನಡ ಚಿತ್ರರಂಗ 60 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದೆ ಎಂದು ಚಿತ್ರರಂಗದ ಅನುಭವಿಗಳು ಹೇಳುತ್ತಿದ್ದಾರೆ.
ಮರು ಬಿಡುಗಡೆಯಾಗುತ್ತಿರುವ ನಮ್ಮ ಚಿತ್ರದ ಬಗ್ಗೆ ಪ್ರೀತಿ ತೋರಿಸಿ ಎಂದ ಶುಭ ಪೂಂಜ - ಮತ್ತೆ ನಮ್ಮ ಚಿತ್ರದ ಮೇಲೆ ಪ್ರೀತಿ ತೋರಿಸ ಎಂದ ಶುಭ
ಮತ್ತೆ ಇದೇ ಶುಕ್ರವಾರ 'ನರಗುಂದ ಬಂಡಾಯ' ಚಿತ್ರವನ್ನು ರೀ ರಿಲೀಸ್ ಮಾಡಲಾಗುತ್ತಿದೆ. ಚಿತ್ರದ ನಾಯಕಿ ಶುಭ ಪೂಂಜ ಮಾತನಾಡಿ, ಈ ಮೊದಲು ನಮ್ಮ ಚಿತ್ರದ ಮೇಲೆ ತೋರಿದ್ದ ಪ್ರೀತಿಯನ್ನು ಮತ್ತೆ ತೋರಿ ಎಂದು ಮನವಿ ಮಾಡಿದ್ದಾರೆ.
ಇನ್ನು ಈ ಕೊರೊನಾ ದಾಳಿಯಿಂದ ನಷ್ಟ ಅನುಭವಿಸುತ್ತಿರುವವರಲ್ಲಿ ಹೊಸ ನಿರ್ಮಾಪಕರೇ ಇದ್ದಾರೆ. ಕಳೆದ ವಾರ ನರಗುಂದ ಬಂಡಾಯ,ಶಿವಾರ್ಜುನ, ಒಂದು ಶಿಕಾರಿಯ ಕಥೆ, ಮೀನಾ ಬಜಾರ್ ,ಕುಷ್ಕ ಚಿತ್ರಗಳು ಬಿಡುಗಡೆಯಾಗಬೇಕಿತ್ತು. ಆದರೆ ಈ ಚಿತ್ರಗಳಲ್ಲಿ 'ನರಗುಂದ ಬಂಡಾಯ' ಹಾಗೂ 'ಶಿವಾರ್ಜುನ' ಚಿತ್ರಗಳು ಗುರುವಾರ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದು ಪ್ರದರ್ಶನವಾಗುತ್ತಿದ್ದವು. ಅದರೆ ಕೊರೊನಾ ಭೀತಿಯಿಂದ ಸರ್ಕಾರ ಒಂದು ವಾರದ ಕಾಲ ಚಿತ್ರಮಂದಿರಗಳನ್ನು ಬಂದ್ ಮಾಡಲು ಆದೇಶ ಹೊರಡಿಸಿದ ಹಿನ್ನೆಲೆ ಚಿತ್ರಮಂದಿರಗಳು ಬಂದ್ ಆಗಿ ಚಿತ್ರ ಪ್ರದರ್ಶನ ಕೂಡಾ ಬಂದ್ ಆಗಿದೆ. 21 ನೇ ತಾರೀಕಿನ ನಂತರ ಮತ್ತೆ ಚಿತ್ರಮಂದಿರಗಳು ತೆರೆಯಲಿವೆ.
ಈ ಕಾರಣದಿಂದ ಮತ್ತೆ ಇದೇ ಶುಕ್ರವಾರ 'ನರಗುಂದ ಬಂಡಾಯ' ಚಿತ್ರವನ್ನು ರೀ ರಿಲೀಸ್ ಮಾಡಲಾಗುತ್ತಿದೆ. ಚಿತ್ರದ ನಾಯಕಿ ಶುಭ ಪೂಂಜ ಮಾತನಾಡಿ, ಈ ಮೊದಲು ನಮ್ಮ ಚಿತ್ರದ ಮೇಲೆ ತೋರಿದ್ದ ಪ್ರೀತಿಯನ್ನು ಮತ್ತೆ ತೋರಿ ಎಂದು ಮನವಿ ಮಾಡಿದ್ದಾರೆ. ಇನ್ನು ಕೊರೊನಾ ಬಗ್ಗೆ ಕೂಡಾ ಮಾತನಾಡಿರುವ ಶುಭ, ಜನರು ಜಾಗ್ರತೆಯಿಂದ ಇರಿ. ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಕೊರೊನಾ ವೈರಸ್ನಿಂದ ದೂರ ಇರಿ. ಎಂದು ಮನವಿ ಮಾಡಿದ್ದಾರೆ. 'ನರಗುಂದ ಬಂಡಾಯ' ಚಿತ್ರದಲ್ಲಿ 'ಗಟ್ಟಿ ಮೇಳ' ಧಾರಾವಾಹಿ ಖ್ಯಾತಿಯ ರಕ್ಷ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಚಿತ್ರಕ್ಕೆ ನಾಗೇಂದ್ರಮಾಗಡಿ ಆ್ಯಕ್ಷನ್ ಕಟ್ ಹೇಳಿದ್ದಾರೆ.