ಕರ್ನಾಟಕ

karnataka

ETV Bharat / sitara

ಶುಭಾ ಪೂಂಜಾ ಯಾವಾಗಲೂ ಬಹಳ ಇಷ್ಟಪಟ್ಟು ಮಾಡುವ ಕೆಲಸ ಇದು..! - Moggina manasu actress Shubha poonja

ಸ್ಯಾಂಡಲ್​ವುಡ್ ನಟಿ ಶುಭಾ ಪೂಂಜಾ ಸ್ವಲ್ಪ ಬಿಡುವು ದೊರೆತರೂ ಗೋಶಾಲೆಗೆ ತೆರಳಿ ಗೋವುಗಳ ಸೇವೆ ಮಾಡುತ್ತಾರೆ. ಪ್ರಾಣಿಗಳು ಎಂದರೆ ಬಹಳ ಇಷ್ಟಪಡುವ ಶುಭಾ ಬಹಳ ಇಷ್ಟಪಟ್ಟು ಗೋಶಾಲೆ ಗೋಡೆಗಳ ಮೇಲೆ ಪೇಯ್ಟಿಂಗ್ ಕೂಡಾ ಮಾಡಿದ್ಧಾರೆ.

Shubha poonja spend time with cows
ಶುಭಾ ಪೂಂಜಾ

By

Published : Jul 11, 2020, 5:00 PM IST

ಜುಲೈ 1 ರಿಂದ ಲಾಕ್​ಡೌನ್​ ಸಡಿಲಿಕೆ ಮಾಡಿದ್ದರೂ ಸಿನಿಮಾ ಕ್ಷೇತ್ರಕ್ಕೆ ಮಾತ್ರ ಇದು ಅನ್ವಯಿಸಿಲ್ಲ. ಧಾರಾವಾಹಿ ಹಾಗೂ ಬಾಕಿ ಇರುವ ಸಿನಿಮಾ ಶೂಟಿಂಗ್​ಗೆ ಸರ್ಕಾರ ಅನುಮತಿ ನೀಡಿದ್ದರೂ ಇನ್ನೂ ಹೊಸ ಸಿನಿಮಾಗಳ ಚಿತ್ರೀಕರಣಕ್ಕೆ ಅನುಮತಿ ನೀಡಿಲ್ಲ.

ಗೋಶಾಲೆ ಗೋಡೆಗಳ ಮೇಲೆ ಶುಭಾ ಪೇಯ್ಟಿಂಗ್

ಈ ಸಮಯದಲ್ಲಿ ಸಿನಿಮಾ ನಟ-ನಟಿಯರು ಸುಮ್ಮನೆ ಸಮಯ ವ್ಯರ್ಥ ಮಾಡದೆ ಕೆಲವೊಂದು ಕೆಲಸಗಳಲ್ಲಿ ಬ್ಯುಸಿ ಆಗಿದ್ಧಾರೆ. ಕೆಲ‌ ಸೆಲಬ್ರಿಟಿಗಳು ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದರೆ, ಮತ್ತೆ ಕೆಲವರು ಪೇಯ್ಟಿಂಗ್​​​, ಹಾಡು, ಡ್ಯಾನ್ಸ್ , ಇಂಟಿರೀಯರ್ ಡೆಕೊರೇಷನ್ ಎಂದು ಬ್ಯುಸಿ ಆಗಿದ್ದಾರೆ. 'ಮೊಗ್ಗಿನ ಮನಸು' ನಾಯಕಿ ಶುಭಾ ಪೂಂಜಾ ಕೂಡಾ ಈ ಸಮಯದಲ್ಲಿ ಬ್ಯುಸಿ ಇದ್ದಾರೆ.

ಗೋವುಗಳೊಂದಿಗೆ ಕಾಲ ಕಳೆಯುತ್ತಿರುವ ನಟಿ

ಲಾಕ್​ ಡೌನ್ ಮುಗಿಯುತ್ತಿದ್ದಂತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಕಾಯುತ್ತಿರುವ ಶುಭಾ ಪೂಂಜಾ ಸದ್ಯಕ್ಕೆ ಸಾಮಾಜಿಕ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಬೆಂಗಳೂರಿನ ವಿದ್ಯಾಪೀಠದ ಗೋ ಶಾಲೆಯ ಗೋಡೆಗಳಿಗೆ ಶುಭಾಪೂಂಜಾ ಬಣ್ಣದ ಚಿತ್ತಾರ ಬಿಡಿಸಿದ್ದಾರೆ. ಶುಭಾ ಹೀಗೆ ಚಿತ್ರ ಬಿಡಿಸುತ್ತಿರುವುದು ಇದೇ ಮೊದಲಲ್ಲ. ಶೂಟಿಂಗ್​​ನಲ್ಲಿ ಸ್ವಲ್ಪ ಬಿಡುವು ದೊರೆತರೂ ಸಾಕು ಶುಭಾ ಗೋಶಾಲೆಗೆ ಬಂದು ಚಿತ್ರ ಬಿಡಿಸುತ್ತಿದ್ದರಂತೆ.

ಹಸುಗಳಿಗೆ ಹಣ್ಣು ತಿನ್ನಿಸುತ್ತಿರುವ ಶುಭಾ ಪೂಂಜಾ

ಮೊದಲಿನಿಂದಲೂ ಪ್ರಾಣಿಪ್ರಿಯೆ ಆಗಿರುವ ಶುಭಾಪೂಂಜಾಗೆ ಹಸು ಹಾಗೂ ಶ್ವಾನಗಳು ಅಂದ್ರೆ ಪಂಚಪ್ರಾಣ. ಹೀಗಾಗಿ ಈ 'ಮೊಗ್ಗಿನ ಮನಸು' ಬೆಡಗಿ ಈ ಗೋಶಾಲೆಯಲ್ಲಿ ಬಂದು ಹಸುಗಳ ಆರೈಕೆ ಮಾಡುತ್ತಿದ್ದಾರೆ. ಮದುವೆ ಆದರೂ ಕೂಡಾ ನಾನು ಗೋವುಗಳ ಆರೈಕೆ ಮಾಡುವುದಾಗಿ ಹೇಳಿದ್ದಾರೆ. ಚಿತ್ರೀಕರಣಕ್ಕೆ ಅನುಮತಿ ದೊರೆಯುತ್ತಿದ್ದಂತೆ 'ಖಾಲಿ ದೋಸೆ ಕಲ್ಪನಾ' ಹಾಗೂ 'ಶ್ರೀದೇವಿ' ಸಿನಿಮಾಗಳಲ್ಲಿ ಶುಭಾ ನಟಿಸಲಿದ್ದಾರೆ.

ಮುದ್ದಿನ ನಾಯಿಯೊಂದಿಗೆ ಶುಭಾ

ABOUT THE AUTHOR

...view details