ಕರ್ನಾಟಕ

karnataka

ETV Bharat / sitara

ಶೀಘ್ರ ಗುಣಮುಖರಾಗಿ ನೀವು ಮತ್ತೆ ಹಾಡಬೇಕು...ಎಸ್​​​ಪಿಬಿಗೆ ಹಾರೈಸಿದ ಶ್ರುತಿ - SPB getting recover

ಎಸ್​​​​ಪಿಬಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರುವುದು ಸಮಾಧಾನದ ವಿಚಾರ. ಸ್ಯಾಂಡಲ್​ವುಡ್ ಹಿರಿಯ ನಟಿ ಶ್ರುತಿ ಕೂಡಾ ಎಸ್​​​​​ಪಿಬಿ ಶೀಘ್ರ ಗುಣಮುಖರಾಗಿ ಮತ್ತೆ ಸಿನಿಮಾಗಳಲ್ಲಿ ಹಾಡಲಿ ಎಂದು ಹಾರೈಸಿದ್ದಾರೆ.

Shruti wish for SPB Speed recovery
ಹಿರಿಯ ನಟಿ ಶ್ರುತಿ

By

Published : Aug 26, 2020, 5:42 PM IST

ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್​​.ಪಿ. ಬಾಲಸುಬ್ರಹ್ಮಣ್ಯಂ ಶೀಘ್ರ ಚೇತರಿಸಿಕೊಳ್ಳಲೆಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಖ್ಯಾತ ನಟ ರಜನಿಕಾಂತ್, ಕಮಲಹಾಸನ್, ನಿರ್ದೇಶಕ ದ್ವಾರಕೀಶ್, ಸಂಗೀತ ನಿರ್ದೇಶಕ ಇಳಯರಾಜ, ಎ.ಆರ್​. ರೆಹಮಾನ್ ಸೇರಿದಂತೆ ಇಡೀ ಭಾರತೀಯ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಪ್ರತಿದಿನ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

ಎಸ್​​​ಪಿಬಿಗೆ ಹಾರೈಸಿದ ಶ್ರುತಿ

ಹಿರಿಯ ನಟಿ ಶ್ರುತಿ ಕೂಡಾ ಎಸ್​​​ಪಿಬಿ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. 'ಕನ್ನಡ ಚಿತ್ರರಂಗದ ಗಾನ ಗಾರುಡಿಗ‌‌ ನೀವು, ವಿಭಿನ್ನ ಕಂಠದಿಂದಲೇ ದೇಶಾದ್ಯಂತ ಅಭಿಮಾನಿ ಬಳಗವನ್ನು ಹೊಂದಿರುವ ನೀವು ಬೇಗ ಗುಣಮುಖರಾಗಿ ಮತ್ತೆ ಹಾಡಬೇಕು. ನಮ್ಮೊಂದಿಗೆ ನೀವು ನೂರು ವರ್ಷ ಬಾಳಬೇಕು. ಆದಷ್ಟು ಬೇಗ ಚೇತರಿಸಿಕೊಂಡು ಮತ್ತೆ ಕನ್ನಡದ ಕಂಪನ್ನು ಎತ್ತಿ ಹಿಡಿಯಬೇಕು' ಎಂದು ಶ್ರುತಿ ಹಾರೈಸಿದ್ದಾರೆ. ಶ್ರುತಿ ಹಾಗೂ ಎಸ್​​​ಪಿಬಿ ಇಬ್ಬರೂ 'ಮುದ್ದಿನ ಮಾವ' ಚಿತ್ರದಲ್ಲಿ ಅಪ್ಪ-ಮಗಳಾಗಿ ಜೊತೆಗೆ ಅಭಿನಯಿಸಿದ್ದರು.

ABOUT THE AUTHOR

...view details