ಕರ್ನಾಟಕ

karnataka

ETV Bharat / sitara

ವಿಭಿನ್ನ ಪ್ರಚಾರದ ಮೂಲಕ ಗಮನ ಸೆಳೆಯುತ್ತಿದೆ ಶೃತಿ ಪ್ರಕಾಶ್ ನಟನೆಯ ಚಿತ್ರ - ಕಡಲ ತೀರದ ಭಾರ್ಗವ ಚಿತ್ರ,

ಬಿಗ್ ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ಅಭಿನಯದ ಚಿತ್ರ ‘ಕಡಲ ತೀರದ ಭಾರ್ಗವ’ ಬಹುತೇಕ ಚಿತ್ರೀಕರಣ ಮುಗಿಸಿದೆ. ಪಟೇಲ್ ವರುಣ್ ರಾಜು, ಭರತ್ ಗೌಡ ಜೊತೆ ಶೃತಿ ಪ್ರಕಾಶ್ ಸ್ಕ್ರೀನ್ ಶೇರ್ ಮಾಡಿದ್ದಾರೆ. ಸದ್ಯ ಚಿತ್ರತಂಡ ಪ್ರಚಾರ ಕಾರ್ಯವನ್ನು ವಿನೂತನ ಶೈಲಿಯಲ್ಲಿ ಆರಂಭಿಸಿದೆ.

Shruti Prakash acting film, Shruti Prakash acting film Kadala theerada Bhargava, Kadala theerada Bhargava movie, Kadala theerada Bhargava movie promotion, ಶೃತಿ ಪ್ರಕಾಶ್ ನಟನೆಯ ಚಿತ್ರ, ವಿಭಿನ್ನ ಪ್ರಚಾರದ ಮೂಲಕ ಗಮನ ಸೆಳೆಯುತ್ತಿದೆ ಶೃತಿ ಪ್ರಕಾಶ್ ನಟನೆಯ ಚಿತ್ರ, ವಿಭಿನ್ನ ಪ್ರಚಾರದ ಮೂಲಕ ಗಮನ ಸೆಳೆಯುತ್ತಿದೆ ಕಡಲ ತೀರದ ಭಾರ್ಗವ ಚಿತ್ರ, ಕಡಲ ತೀರದ ಭಾರ್ಗವ ಚಿತ್ರ, ಕಡಲ ತೀರದ ಭಾರ್ಗವ ಚಿತ್ರ ಪ್ರಚಾರ,
ವಿಭಿನ್ನ ಪ್ರಚಾರದ ಮೂಲಕ ಗಮನ ಸೆಳೆಯುತ್ತಿದೆ ಶೃತಿ ಪ್ರಕಾಶ್ ನಟನೆಯ ಚಿತ್ರ

By

Published : Apr 7, 2021, 1:14 PM IST

ಇತ್ತೀಚೆಗೆ ಬ್ಲೀಡ್ ಆರ್​ಸಿಬಿಯ ಸಹಯೋಗದೊಂದಿಗೆ ಜೆ.ಪಿ. ನಗರದ ಪುಟ್ಟೇನಹಳ್ಳಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ರಘು ದೀಕ್ಷಿತ್, ಅಲೋಕ್, ಭಾ.ಮ. ಹರೀಶ್, ಬೃಂದಾ ಆಚಾರ್ಯ, ದಿಶಾ ಪೂವಯ್ಯ ಮುಂತಾದ ಗಣ್ಯರು ಈ ರಕ್ತದಾನ ಶಿಬಿರಕ್ಕೆ ಆಗಮಿಸಿ ಚಾಲನೆ ನೀಡಿದರು.

ವಿಭಿನ್ನ ಪ್ರಚಾರದ ಮೂಲಕ ಗಮನ ಸೆಳೆಯುತ್ತಿದೆ ಶೃತಿ ಪ್ರಕಾಶ್ ನಟನೆಯ ಚಿತ್ರ ಕಡಲ ತೀರದ ಭಾರ್ಗವ

ಕಡಲ ತೀರದಲ್ಲಿ ವಾಸಿಸುವ ನಾಯಕನ ಹೆಸರು ಭಾರ್ಗವ ಅಂತ.‌ ಹಾಗಾಗಿ ಈ ಚಿತ್ರದ ಶೀರ್ಷಿಕೆ ‘ಕಡಲ ತೀರದ ಭಾರ್ಗವ’ ಎಂದು ಇಡಲಾಗಿದೆಯಂತೆ. ಹಾಗಂತ ಇದು ಸಾಹಿತಿ ಶಿವರಾಮ ಕಾರಂತ ಅವರ ಜೀವನ ಕುರಿತಾದ ಚಿತ್ರವಲ್ಲ. ಪಟೇಲ್ ವರುಣ್ ರಾಜು, ಭರತ್ ಗೌಡ, ಶೃತಿ ಪ್ರಕಾಶ್ ಅಲ್ಲದೇ, ಕೆ.ಎಸ್.ಶ್ರೀಧರ್, ರಾಘವ್ ನಾಗ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ವಿಭಿನ್ನ ಪ್ರಚಾರದ ಮೂಲಕ ಗಮನ ಸೆಳೆಯುತ್ತಿದೆ ಶೃತಿ ಪ್ರಕಾಶ್ ನಟನೆಯ ಚಿತ್ರ ಕಡಲ ತೀರದ ಭಾರ್ಗವ

ಬೆಂಗಳೂರು, ಕುಂದಾಪುರ, ಭಟ್ಕಳ, ಕುಮಟಾ, ಮುರುಡೇಶ್ವರ ಮುಂತಾದ ಕಡೆ 63 ದಿನಗಳ ಚಿತ್ರೀಕರಣ ನಡೆದಿದೆ. ಪನ್ನಗ ಸೋಮಶೇಖರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಅನಿಲ್ ಸಿ.ಜೆ ಸಂಗೀತ ನಿರ್ದೇಶನ, ಕೀರ್ತನ್ ಪೂಜಾರ್ ಛಾಯಾಗ್ರಹಣ ಹಾಗೂ ಆಶಿಕ್ ಕುಸುಗೊಳ್ಳಿ, ಉಮೇಶ್ ಭೋಸಗಿ ಅವರ ಸಂಕಲನವಿದೆ.

ವಿಭಿನ್ನ ಪ್ರಚಾರದ ಮೂಲಕ ಗಮನ ಸೆಳೆಯುತ್ತಿದೆ ಶೃತಿ ಪ್ರಕಾಶ್ ನಟನೆಯ ಚಿತ್ರ ಕಡಲ ತೀರದ ಭಾರ್ಗವ

ವರುಣ್ ರಾಜು ಹಾಗೂ ಭರತ್ ಗೌಡ ನಿರ್ಮಿಸುತ್ತಿರುವ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಜೂನ್​ನಲ್ಲಿ ಚಿತ್ರ ತೆರೆಗೆ ಬರಲಿದೆ.

ವಿಭಿನ್ನ ಪ್ರಚಾರದ ಮೂಲಕ ಗಮನ ಸೆಳೆಯುತ್ತಿದೆ ಶೃತಿ ಪ್ರಕಾಶ್ ನಟನೆಯ ಚಿತ್ರ ಕಡಲ ತೀರದ ಭಾರ್ಗವ

ABOUT THE AUTHOR

...view details