ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ನೀಲ್ ನಿರ್ದೇಶದಲ್ಲಿ ಮೂಡಿಬರುತ್ತಿರುವ ಸಲಾರ್ ಸಿನಿಮಾದಲ್ಲಿ ಪ್ರಭಾಸ್ಗೆ ಜೋಡಿ ಯಾರಾಗ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಆದ್ರೆ ಇದೀಗ ಚಿತ್ರತಂಡ ಆ ಕತೂಹಲಕ್ಕೆ ತೆರೆ ಎಳೆದಿದ್ದು, ಸಲಾರ್ ನಾಯಕಿ ಯಾರೆಂದು ಘೋಷಿಸಿದೆ.
ಹೌದು, ತೆಲುಗು ತಾರೆ ಶೃತಿ ಹಾಸನ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ಶೃತಿಗೆ ಸಲಾರ್ ಚಿತ್ರತಂಡ ದೊಡ್ಡ ಗಿಫ್ಟ್ ನೀಡಿದ್ದು, ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಜೊತೆ ನಟಿಸಲು ಅವಕಾಶ ಕೊಟ್ಟಿದೆ. ಈ ಮೂಲಕ ಸಲಾರ್ ಅಭಿಮಾನಿಗಳಿಗೂ ಇಷ್ಟು ದಿನ ಇದ್ದ ಕುತೂಹಲ ಮರೆಯಾಗಿದೆ.