ಕರ್ನಾಟಕ

karnataka

ETV Bharat / sitara

ಪ್ರೀತಿಯ ಅಪ್ಪನಿಗೆ ಹುಟ್ಟುಹಬ್ಬದ ಶುಭ ಕೋರಿದ ಶ್ರುತಿ ಹಾಸನ್ - Shruti haasan Birthday wishes to Father

ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬಹುಭಾಷಾ ನಟ ಕಮಲ್​ ಹಾಸನ್​​​ಗೆ ಪುತ್ರಿ ಶ್ರುತಿ ಹಾಸನ್ ಶುಭ ಕೋರಿದ್ದಾರೆ. ಕಮಲ್ ಹಾಸನ್ ಸದ್ಯಕ್ಕೆ ರಾಜಕೀಯದಲ್ಲಿ ಹೆಚ್ಚು ಬ್ಯುಸಿ ಇದ್ದಾರೆ. 'ಇಂಡಿಯನ್-2' ಚಿತ್ರದಲ್ಲಿ ಕಮಲ್ ಹಾಸನ್ ನಟಿಸುತ್ತಿದ್ದು ಲಾಕ್​ಡೌನ್​​ ಸಮಯದಲ್ಲಿ ಸ್ಥಗಿತಗೊಂಡಿದ್ದ ಚಿತ್ರೀಕರಣ ಮತ್ತೆ ಆರಂಭವಾಗಬೇಕಿದೆ.

Kamal haasan 66th Birthday
ಕಮಲ್ ಹಾಸನ್

By

Published : Nov 7, 2020, 11:01 AM IST

ಖ್ಯಾತ ತಮಿಳು ನಟ ಕಮಲ್​​ ಹಾಸನ್ ಇಂದು 66 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತನ್ನ ಅಭಿನಯದಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿರುವ ನಟನಿಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಪ್ರೀತಿಯ ಶುಭಾಶಯ ಕೋರಿದ್ದಾರೆ. ವಿಶೇಷವಾಗಿ ಕಮಲ್ ಹಾಸನ್ ಪುತ್ರಿ, ನಟಿ, ಗಾಯಕಿ ಶ್ರುತಿ ಹಾಸನ್ ಕೂಡಾ ಅಪ್ಪನಿಗೆ ಬರ್ತ್​ಡೇ ಶುಭ ಕೋರಿದ್ದಾರೆ.

ಬಹುಭಾಷಾ ನಟ ಕಮಲ್ ಹಾಸನ್

ಬಾಲ್ಯದೊಂದಿಗೆ ತಂದೆ ಜೊತೆ ಇರುವ ಬ್ಲ್ಯಾಕ್ ಅ್ಯಂಡ್ ವೈಟ್ ಫೋಟೋ ಹಂಚಿಕೊಂಡಿರುವ ಶ್ರುತಿ ಹಾಸನ್, ''ಹುಟ್ಟುಹಬ್ಬದ ಶುಭಾಶಯಗಳು ನನ್ನ ಪ್ರೀತಿಯ ಬಾಪೂಜಿ, ಅಪ್ಪ, ಡ್ಯಾಡಿ. ಪ್ರತಿ ವರ್ಷದಂತೆ ಈ ವರ್ಷ ಕೂಡಾ ಮತ್ತೊಂದು ಸ್ಮರಣೀಯ ವರ್ಷವಾಗಲಿ. ಈ ಪ್ರಪಂಚಕ್ಕೆ ನೀವು ಏನೆಲ್ಲಾ ನೀಡಬೇಕು ಎಂದುಕೊಂಡಿದ್ದೀರೋ ಅದನ್ನು ನೋಡಲು ಕಾತರದಿಂದ ಕಾಯುತ್ತಿದ್ದೇನೆ'' ಎಂದು ಶ್ರುತಿ ಹಾಸನ್ ವಿಶೇಷವಾಗಿ ಪ್ರೀತಿಯ ಅಪ್ಪನಿಗೆ ಶುಭ ಕೋರಿದ್ದಾರೆ.

7 ನವೆಂಬರ್ 1954 ರಲ್ಲಿ ಜನಿಸಿದ ಕಮಲ್ ಹಾಸನ್ ಬಾಲನಟನಾಗಿ ಚಿತ್ರರಂಗಕ್ಕೆ ಬಂದವರು. 1960 ರಲ್ಲಿ 6 ವರ್ಷದವರಿರುವಾಗ 'ಕಳತ್ತೂರ್ ಕಣ್ಣಮ್ಮ' ಚಿತ್ರದಲ್ಲಿ ಕಮಲ್ ಹಾಸನ್ ಬಾಲನಟನಾಗಿ ನಟನೆ ಆರಂಭಿಸಿದರು. ಅಲ್ಲಿಂದ ಸುಮಾರು 7-8 ಚಿತ್ರಗಳಲ್ಲಿ ಬಾಲನಟನಾಗಿ ನಟಿಸಿದ ಕಮಲ್ ಹಾಸನ್​​ 1975 ರಲ್ಲಿ ಕೆ. ಬಾಲಚಂದರ್​ ನಿರ್ದೇಶನದ 'ಅಪೂರ್ವ ರಾಗಂಗಳ್' ಚಿತ್ರದ ಮೂಲಕ ಪ್ರಮುಖ ಪಾತ್ರದಲ್ಲಿ ನಟಿಸಲು ಆರಂಭಿಸಿದರು. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿ ಇದುವರೆಗೂ ಕಮಲ್ ಹಾಸನ್ ಸುಮಾರು 225 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಕೋಕಿಲ, ತಪ್ಪಿದ ತಾಳ, ಮರಿಯಾ ಮೈ ಡಾರ್ಲಿಂಗ್, ಬೆಂಕಿಯಲ್ಲಿ ಅರಳಿದ ಹೂವು, ರಾಮ ಶಾಮ ಭಾಮ ಚಿತ್ರಗಳಲ್ಲಿ ಕಮಲ್ ಹಾಸನ್ ನಟಿಸಿದ್ದಾರೆ.

66ನೇ ವಸಂತಕ್ಕೆ ಕಾಲಿಟ್ಟ ನಟ

'ಮಕ್ಕಲ್ ನೀದಿ ಮಯ್ಯಮ್' ಎಂಬ ತಮ್ಮದೇ ರಾಜಕೀಯ ಪಕ್ಷ ಸ್ಥಾಪಿಸಿರುವ ಕಮಲ್ ಹಾಸನ್ ಈಗ ಸಿನಿಮಾಗಳಿಗಿಂತ ಪಕ್ಷ ಸಂಘಟನೆಯಲ್ಲೇ ಹೆಚ್ಚು ಬ್ಯುಸಿಯಾಗಿದ್ದಾರೆ. 2021 ರಲ್ಲಿ ನಡೆಯುವ ತಮಿಳು ನಾಡು ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧಿಸುವುದಾಗಿ ಕಮಲ್ ಹಾಸನ್ ಇತ್ತೀಚೆಗೆ ಘೋಷಣೆ ಮಾಡಿದ್ದಾರೆ. ಸದ್ಯಕ್ಕೆ ಕಮಲ್ ಹಾಸನ್ 'ಇಂಡಿಯನ್-2' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಇದರೊಂದಿಗೆ ತಮಿಳು ಬಿಗ್​ಬಾಸ್ ನಿರೂಪಣೆ ಕೂಡಾ ಮಾಡುತ್ತಿದ್ದಾರೆ.

ಪಕ್ಷದ ಪ್ರಚಾರ ಕಾರ್ಯದಲ್ಲಿ ಕಮಲ್ ಹಾಸನ್

ABOUT THE AUTHOR

...view details