ಶ್ರುತಿ ಹಾಸನ್, ಖ್ಯಾತ ತಮಿಳು ನಟ ಕಮಲ್ ಹಾಸನ್ ಪುತ್ರಿ. ನಟಿಯಾಗಿ ಮಾತ್ರವಲ್ಲ, ಗಾಯಕಿಯಾಗಿ ಕೂಡಾ ಗುರುತಿಸಿಕೊಂಡಿರುವ ಶ್ರುತಿ ಹಾಸನ್ ತಮ್ಮ ಗ್ಲ್ಯಾಮರ್ನಿಂದಲೇ ಬಹಳ ಫೇಮಸ್. ಶ್ರುತಿ ಹಾಸನ್ ಈಗ ಈಜಿಪ್ಟ್ ರಾಣಿ ಕ್ಲಿಯೋಪಾತ್ರ ಆಗಿ ಬದಲಾಗಿದ್ದಾರೆ.
ಶ್ರುತಿ ಹಾಸನ್ ಕ್ಲಿಯೋಪಾತ್ರ ಆಗಿ ಸಿನಿಮಾದಲ್ಲಿ ನಟಿಸುತ್ತಿರಬಹುದು ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಫೇಸ್ ಆ್ಯಪ್ ಮೂಲಕ ಶ್ರುತಿ ಹಾಸನ್ ಕ್ಲಿಯೋಪಾತ್ರ ಆಗಿ ಬದಲಾಗಿದ್ದಾರೆ. ಇತ್ತೀಚೆಗೆ ಫೇಸ್ ಆ್ಯಪ್ ಬಹಳ ಫೇಮಸ್ ಆಗುತ್ತಿದೆ. ಹಾಲಿವುಡ್ ಚಿತ್ರಗಳ ವಿಡಿಯೋ ಕ್ಲಿಪಿಂಗ್ಗಳಿಗೆ ಜನರು, ಹೆಚ್ಚಾಗಿ ಯುವಜನತೆ ತಮ್ಮ ಮುಖ ಸೇರಿಸಿ ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾಗಳಿಗೆ ಅಪ್ಲೋಡ್ ಮಾಡುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಒಂದು ರೀತಿಯ ಫನ್ ಆಗಿದೆ.