ನಟಿ ಶೃತಿ ಹಾಸನ್ ಅವರಿಗೆ ಪ್ರೇಮಭಂಗವಾಗಿದೆ. ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಮೈಕೆಲ್ ಕಾರ್ಸೇಲ್-ಶೃತಿ ಲವ್ ಬ್ರೇಕಪ್ ಆಗಿದೆ.
ಎರಡು ವರ್ಷದ ಪ್ರೀತಿಗೆ ಎಳ್ಳು-ನೀರು...ಶೃತಿ ಹಾಸನ್ಗೆ ಲವ್ ಫೇಲ್ಯೂರ್ ! - ಲವ್ ಫೇಲ್ಯೂವರ್
ಶೃತಿ ಹಾಸನ್ ಪ್ರೇಮ ನೌಕೆ ಮುಗುಚಿದೆ. ಎರಡು ವರ್ಷಗಳ ಪ್ರೀತಿ ಅಂತ್ಯವಾಗಿದೆ. ಪ್ರಿಯತಮ ಮೈಕಲ್, ಶೃತಿ ಜತೆ ಸಂಬಂಧ ಕಡಿದುಕೊಂಡಿದ್ದಾರೆ.
ನಟ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್, ಲಂಡನ್ ಮೂಲದ ರಂಗಭೂಮಿ ಕಲಾವಿದ ಮೈಕೆಲ್ ಅವರನ್ನು ಪ್ರೀತಿಸುತ್ತಿದ್ದರು. ಈತನಿಗಾಗಿಯೇ ಮುಂಬೈನಲ್ಲಿ ಮನೆ ಮಾಡಿ ವಾಸವಾಗಿದ್ದರು. ಈಗ ಇದ್ದಕ್ಕಿದ್ದಂತೆ ಇವರ ಪ್ರೀತಿ ಒಡೆದು ಹೋಗಿದೆ. ಮೈಕಲ್, ಇಂದು ತಮ್ಮ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಬ್ರೇಕಪ್ ವಿಚಾರ ಪ್ರಸ್ತಾಪಿಸಿದ್ದಾರೆ.
'ದುರದೃಷ್ಟವಶಾತ್ ಲೈಫ್ನಲ್ಲಿ ನಾವಿಬ್ಬರೂ ವಿರುದ್ಧ ದಿಕ್ಕಿನಲ್ಲಿ ನಿಲ್ಲಬೇಕಾಗಿದೆ. ಆದ್ದರಿಂದ ನಾವಿಬ್ಬರು ಒಂಟಿ ದಾರಿಯಲ್ಲಿ ನಡೆಯಬೇಕಾಗಿದೆ. ಆದರೆ, ಈ ಯಂಗ್ ಲೇಡಿ ಯಾವತ್ತಿಗೂ ನನ್ನ ಅತ್ಯುತ್ತಮ ಸಂಗಾತಿಯಾಗಿರುತ್ತಾಳೆ. ಅವಳು ನನ್ನ ಸ್ನೇಹಿತೆಯಾಗಿದ್ದಕ್ಕೆ ಕೃತಜ್ಞತೆಗಳು' ಎಂದು ಬ್ರೇಕಪ್ ನೋಟ್ ಬರೆದುಕೊಂಡಿದ್ದಾರೆ. ಈ ಬಗ್ಗೆ ಶೃತಿ ಕಡೆಯಿಂದ ಯಾವುದೇ ರಿಯಾಕ್ಷನ್ ಬಂದಿಲ್ಲ.