ಚಾಮರಾಜನಗರ: ಚಿತ್ರನಟಿ, ಬಿಜೆಪಿ ಮುಖಂಡೆ ಹಾಗೂ ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆಯೂ ಆಗಿರುವ ಶೃತಿ ತಮ್ಮ ಹುಟ್ಟುಹಬ್ಬವನ್ನು ಬಂಡೀಪುರದ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಆಚರಿಸಿಕೊಂಡರು.
ಬಂಡೀಪುರ ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಜನ್ಮ ದಿನ ಆಚರಿಸಿಕೊಂಡ ಶೃತಿ - ನಟಿ ಶೃತಿ ಹುಟ್ಟುಹಬ್ಬ
ನಟಿ ಶೃತಿ ತಮ್ಮ ಜನ್ಮದಿನವನ್ನು ಬಂಡೀಪುರದ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಆಚರಿಸಿಕೊಂಡಿದ್ದಾರೆ.
ಬರ್ತ್ ಡೇ ಸಂಭ್ರಮದಲ್ಲಿ ಶೃತಿ
ಬಂಡೀಪುರ ಕ್ಯಾಂಪಸ್‍ನ ಮುಂಭಾಗದಲ್ಲೇ ಕೇಕ್ ಕತ್ತರಿಸಿದರು. ಬಳಿಕ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ. ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಶೃತಿ ಊಟಿಯತ್ತ ಪ್ರಯಾಣ ಬೆಳೆಸಿದರು ಎಂದು ಮೂಲಗಳು ತಿಳಿಸಿವೆ.
ಹುಟ್ಟು ಹಬ್ಬ ಆಚರಣೆಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ, ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.