ಕರ್ನಾಟಕ

karnataka

ETV Bharat / sitara

'ಮದಗಜ' ಸಿನಿಮಾ ಶೂಟಿಂಗ್​ ಸೆಟ್​ನಲ್ಲಿ ಸಹ ಕಲಾವಿದನಿಗೆ ಗಾಯ: ಶ್ರೀಮುರಳಿಯಿಂದ ಆರೈಕೆ - shrimurali took care of Co actor

ನಟ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ಶೂಟಿಂಗ್ ಸ್ಪಾಟ್​ನಲ್ಲಿ ಸಣ್ಣ ಅವಘಡವೊಂದು ಸಂಭವಿಸಿದ್ದು, ಆಕಸ್ಮಿಕವಾಗಿ ಸಹ ಕಲಾವಿದ ಪುಟ್ಟರಾಜ ಎಂಬವರ ಕಾಲಿಗೆ ಏಟಾಗಿದೆ. ಈ ಸಂದರ್ಭದಲ್ಲಿ ಮುರಳಿ ಆರೈಕೆ ಮಾಡಿದ್ದಾರೆ.

Actor shrimurali
ಸಹ ಕಲಾವಿದನ ಆರೈಕೆ ಮಾಡಿದ ಶ್ರೀಮುರಳಿ

By

Published : Aug 23, 2021, 10:59 AM IST

Updated : Aug 23, 2021, 11:13 AM IST

ರೋರಿಂಗ್ ಸ್ಟಾರ್ ಜನಪ್ರಿಯತೆಯ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ಶೂಟಿಂಗ್ ಸ್ಪಾಟ್​ನಲ್ಲಿ ಅವಘಡವೊಂದು ನಡೆದಿದೆ.

ಕೊನೆಯ ಹಂತ ಚಿತ್ರೀಕರಣ ಆರಂಭಿಸಿದ ಮದಗಜ ಚಿತ್ರತಂಡ ಬೆಂಗಳೂರಿನ ಹೊರವಲಯದಲ್ಲಿ ಅದ್ದೂರಿ ಸೆಟ್​ ಹಾಕಿ ಆಕ್ಷನ್ ಸಿಕ್ವೇನ್ಸ್ ಚಿತ್ರೀಕರಣ ಮಾಡುತ್ತಿತ್ತು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಹ ಕಲಾವಿದ ಪುಟ್ಟರಾಜ ಎಂಬವರ ಕಾಲಿಗೆ ಏಟಾಗಿದೆ. ಈ ಸಂದರ್ಭದಲ್ಲಿ ಸ್ವತಃ ಶ್ರೀಮುರಳಿ ಆರೈಕೆ ಮಾಡಿದ್ದಾರೆ.

ಸಹ ಕಲಾವಿದನ ಆರೈಕೆ ಮಾಡಿದ ಶ್ರೀಮುರಳಿ

ನಿರ್ದೇಶಕ ಮಹೇಶ್ ಕುಮಾರ್ ನಿರ್ದೇಶನದ ಮದಗಜ ಸಿನಿಮಾದ ಚಿತ್ರೀಕರಣ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. ಈ ಸಿನಿಮಾದಲ್ಲಿ ಶ್ರೀಮುರಳಿಗೆ ಆಶಿಕಾ ರಂಗನಾಥ್ ಜೋಡಿಯಾಗಿದ್ದು, ಉಮಾಪತಿ ಶ್ರೀನಿವಾಸ್ ಈ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಪೋಸ್ಟರ್ ಮೇಕಿಂಗ್​ನಿಂದ ಗಮನ ಸೆಳೆಯುತ್ತಿರುವ ಮದಗಜ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಮೂಡಿ ಬರಲಿದೆ.

ಕೆಲವು ದಿನಗಳ ಹಿಂದೆ ಅಜಯ್ ರಾವ್ ಹಾಗೂ ರಚಿತಾ ರಾಮ್ ಅಭಿನಯದ ಲವ್ ಯು ರಚ್ಚು ಸಿನಿಮಾ ಚಿತ್ರೀಕರಣ ವೇಳೆ ಫೈಟರ್ ವಿವೇಕ್ ಸಾವನ್ನಪ್ಪಿದ್ದರು.

Last Updated : Aug 23, 2021, 11:13 AM IST

ABOUT THE AUTHOR

...view details