ಕರ್ನಾಟಕ

karnataka

ETV Bharat / sitara

ವನ್ಯಜೀವಿ ಸಂರಕ್ಷಣಾ ಅಭಿಯಾನಕ್ಕೆ ಬಂಡೀಪುರದತ್ತ ಹೊರಟ "ಉಗ್ರಂ" ವೀರ - ವನ್ಯಜೀವಿ ಸಂರಕ್ಷಣಾ ರಾಯಭಾರಿ ಶ್ರೀಮುರುಳಿ

ವನ್ಯಜೀವಿ ಸಂರಕ್ಷಣಾ ಅಭಿಯಾನ ಶುರುವಾಗಿದ್ದು, ಈ ಅಭಿಯಾನದ ರಾಯಭಾರಿಯಾಗಿರುವ ಶ್ರೀಮುರುಳಿ ಬಂಡೀಪುರ ಅರಣ್ಯ ಧಾಮಕ್ಕೆ ಹೊರಟಿದ್ದಾರೆ. ಹಾಗೂ ಈ ಅಭಿಯಾನಕ್ಕೆ ಕೈ ಜೋಡಿಸಿ ಎಂದು ಎಲ್ಲರಿಗೂ ಮನವಿ ಮಾಡಿದ್ದಾರೆ.

ಶ್ರೀಮುರುಳಿ

By

Published : Nov 6, 2019, 7:48 AM IST

ಕರ್ನಾಟಕ ಸರ್ಕಾರದಿಂದ ವನ್ಯಜೀವಿ ಸಂರಕ್ಷಣಾ ರಾಯಭಾರಿಯಾಗಿ ‌ರೋರಿಂಗ್ ಸ್ಟಾರ್ ಶ್ರೀಮುರಳಿ ಆಯ್ಕೆಯಾಗಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಸೆಪ್ಟೆಂಬರ್​​ನಲ್ಲಿ ವನ್ಯಜೀವಿ ಸಂರಕ್ಷಣಾ ರಾಯಭಾರಿಯಾಗಿ ಆಯ್ಕೆಯಾದ ರೋರಿಂಗ್ ಸ್ಟಾರ್ ಶ್ರೀ ಮುರಳಿ ಇಷ್ಟು ದಿನ ಭರಾಟೆ ಚಿತ್ರದ ಪ್ರಮೋಷನ್​​​ನಲ್ಲಿ ಬ್ಯುಸಿ ಇದ್ರು.

ಸದ್ಯ ಭರಾಟೆ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಸಕ್ಸಸ್​​ನಲ್ಲಿ ತೇಲುತ್ತಿರುವ ರೋರಿಂಗ್ ಸ್ಟಾರ್, ರಾಯಭಾರಿಯಾದ ಮೇಲೆ ಮೊದಲ ಬಾರಿ ಬಂಡಿಪುರ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಭೇಟಿ ನೀಡುತಿದ್ದಾರೆ. ವಿಷಯ ಅಂದರೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಪ್ರವಾಸಕ್ಕಾಗಿ ಬಂಡೀಪುರಕ್ಕೆ ಹೋಗುತ್ತಿಲ್ಲ. ತಾವು ವಹಿಸಿಕೊಂಡಿರುವ ಜವಾಬ್ದಾರಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಬಂಡೀಪುರ ಅರಣ್ಯದತ್ತ ಅಗಸ್ತ್ಯ ಹೊರಟಿದ್ದಾರೆ.

ಶ್ರೀಮುರುಳಿ

ಸದ್ಯ ವನ್ಯಜೀವಿ ಸಂರಕ್ಷಣಾ ಅಭಿಯಾನ ಶುರುವಾಗಿದ್ದು, ಈ ಒಂದು ಕೆಲಸವನ್ನು ದೇವರ ಕೆಲಸವೆಂದು ನಂಬಿದ್ದು ನನ್ನ ಜವಾಬ್ದಾರಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ನಾನು ಬಂಡೀಪುರಕ್ಕೆ ಹೊರಟಿದ್ದೇನೆ. ಇಂದು ನಾವು ಕಾಡನ್ನು ಸಂರಕ್ಷಿಸಿದರೆ ನಮ್ಮ ನಾಡು ಚೆನ್ನಾಗಿರುತ್ತೆ ಎಂಬುದು ಎಲ್ಲರಿಗೂ ಗೊತ್ತಿರುವುದೇ. ಈ ನಿಟ್ಟಿನಲ್ಲಿ ನಾನು ನನ್ನ ಜವಾಬ್ದಾರಿಯನ್ನು ನಿರ್ವಹಿಸುವ ಸಲುವಾಗಿ ಬಂಡೀಪುರಕ್ಕೆ ಹೊರಟಿದ್ದೇನೆ‌. ನೀವು ಎಲ್ಲಿದ್ದೀರೋ ಅಲ್ಲಿಂದಲೇ ಅರಣ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಣೆ ಮಾಡಿ ಎಂದು ಶ್ರೀಮುರಳಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ

ABOUT THE AUTHOR

...view details