ಕರ್ನಾಟಕ

karnataka

ETV Bharat / sitara

ಹುಲಿಗೆಮ್ಮ ದೇಗುಲದಲ್ಲಿ ಶ್ರೇಯಸ್‌ ಮಂಜು ನಟನೆಯ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ - ನಟ ಶ್ರೇಯಸ್ಸ್ ಮಂಜು,

ಶ್ರೇಯಸ್​ ಮಂಜು ಅಭಿನಯದ ನೂತನ ಚಿತ್ರದ ಸ್ಕ್ರಿಪ್ಟ್ ಪೂಜೆಯನ್ನು ಹುಲಿಗೆಮ್ಮ ದೇವಿ ಸನ್ನಿಧಿಯಲ್ಲಿ ನೆರವೇರಿಸಲಾಯಿತು.

Shreyas Manju new movie script worship, Shreyas Manju new movie script worship in Huligemma temple, actor Shreyas Manju, actor Shreyas Manju news,  ಶ್ರೇಯಸ್ಸ್ ಮಂಜು ನೂತನ ಚಿತ್ರದ ಸ್ಕ್ರಿಪ್ಟ್ ಪೂಜೆ, ಹುಲಿಗೆಮ್ಮ ದೇವಸ್ಥಾನದಲ್ಲಿ  ಶ್ರೇಯಸ್ಸ್ ಮಂಜು ನೂತನ ಚಿತ್ರದ ಸ್ಕ್ರಿಪ್ಟ್ ಪೂಜೆ, ನಟ ಶ್ರೇಯಸ್ಸ್ ಮಂಜು, ನಟ ಶ್ರೇಯಸ್ಸ್ ಮಂಜು ಸುದ್ದಿ,
ಹುಲಿಗೆಮ್ಮ ದೇವಸ್ಥಾನದಲ್ಲಿ ತಮ್ಮ ನೂತನ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿಸಿದ ನಟ ಶ್ರೇಯಸ್​ ಮಂಜು

By

Published : May 6, 2021, 7:39 AM IST

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್​ ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರವನ್ನು ‘ಅಧ್ಯಕ್ಷ’, ‘ಮುಕುಂದ ಮುರಾರಿ’, ‘ಪೊಗರು’ ಚಿತ್ರಗಳ ನಿರ್ದೇಶಕ ನಂದ ಕಿಶೋರ್ ನಿರ್ದೇಶನ ಮಾಡ್ತಿದ್ದಾರೆ. ಈಗ ಹೆಸರಿಡದ ನೂತನ ಚಿತ್ರದ ಸ್ಕ್ರಿಪ್ಟ್ ಪೂಜೆಯನ್ನು ಇತ್ತೀಚೆಗೆ ಹೊಸಪೇಟೆ ಬಳಿಯ ಮುನಿರಾಬಾದ್​ನ ಹುಲಿಗೆಮ್ಮ ದೇವಿ ಸನ್ನಿಧಿಯಲ್ಲಿ ನೆರವೇರಿಸಲಾಯಿತು.

ಹುಲಿಗೆಮ್ಮ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆಗೆ ಆಗಮಿಸಿದ ಚಿತ್ರತಂಡ

ಕೊರೊನಾ ಹಾವಳಿ ಕಡಿಮೆ ಆದ ಮೇಲೆ ಈ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಮುಹೂರ್ತ ಸಮಾರಂಭ ನಡೆಯಲಿದೆ. ಗುಜ್ಜಲ್ ಪುರುಷೋತ್ತಮ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇವರು ಟಗರು ಚಿತ್ರದಲ್ಲಿ ‌ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದರು.

ಹುಲಿಗೆಮ್ಮ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ

ಇದು ಪುರುಷೋತ್ತಮ್ ‘ಗುಜ್ಜಲ್ ಟಾಕೀಸ್’ ಲಾಂಛನದಲ್ಲಿ ನಿರ್ಮಿಸುತ್ತಿರುವ ಮೊದಲ ಚಿತ್ರ. ಚಂದನ್ ಶೆಟ್ಟಿ ಸಂಗೀತ ನೀಡುತ್ತಿದ್ದು, ಶೇಖರ್ ಚಂದ್ರು ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆಯುತ್ತಿದ್ದಾರೆ‌.

ABOUT THE AUTHOR

...view details