ಕಣ್ಸನ್ನೆಯಿಂದಲೇ ಪಡ್ಡೆ ಹುಡುಗರ ಮನಸ್ಸು ಕದ್ದಿದ್ದ ಮಲಯಾಳಿ ಬೆಡಗಿ ಪ್ರಿಯಾ ವಾರಿಯರ್ ಇದೀಗ ಕನ್ನಡದ ಸಿನಿಮಾ ‘ವಿಷ್ಣುಪ್ರಿಯ’ದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೇಯಸ್ ಮಂಜು ನಾಯಕನಾಗಿ ಅಭಿನಯಿಸುತ್ತಿದ್ದು, ಚಿತ್ರತಂಡ ಸದ್ಯ ಶೂಟಿಂಗ್ನಲ್ಲಿ ಬ್ಯುಸಿ ಇದೆ.
ಕನ್ನಡ ಸಿನಿಮಾದಲ್ಲಿ ನಟಿಸ್ತಿದ್ದಾರೆ ಕಣ್ಸನ್ನೆ ಬೆಡಗಿ : ಕಿಸ್ಸಿಂಗ್ ಫೋಟೋ ವೈರಲ್! - ಕನ್ನಡ ಸಿನಿಮಾದಲ್ಲಿ ಪ್ರಿಯಾ ವಾರಿಯರ್
ಪ್ರಿಯಾ ವಾರಿಯರ್ ಇದೀಗ ಕನ್ನಡದ ಸಿನಿಮಾ ‘ವಿಷ್ಣುಪ್ರಿಯ’ದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೇಯಸ್ ಮಂಜು ನಾಯಕನಾಗಿ ಅಭಿನಯಿಸುತ್ತಿದ್ದು, ಚಿತ್ರತಂಡ ಸದ್ಯ ಶೂಟಿಂಗ್ನಲ್ಲಿ ಬ್ಯುಸಿ ಇದೆ.
![ಕನ್ನಡ ಸಿನಿಮಾದಲ್ಲಿ ನಟಿಸ್ತಿದ್ದಾರೆ ಕಣ್ಸನ್ನೆ ಬೆಡಗಿ : ಕಿಸ್ಸಿಂಗ್ ಫೋಟೋ ವೈರಲ್! http://10.10.50.85//karnataka/03-December-2019/vishnupriya--priya-variar1575340620204-5_0312email_1575340631_347.jpg](https://etvbharatimages.akamaized.net/etvbharat/prod-images/768-512-5250536-thumbnail-3x2-giri.jpg)
ಸಿನಿಮಾದಲ್ಲಿ ಚುಂಬನದ ಸನ್ನಿವೇಶಗಳಿವೆಯಂತೆ. ಈ ಸೀನ್ ಶೂಟ್ ಮಾಡುವಾಗ ತೆಗೆದಿರುವ ಫೋಟೋಗಳು ಹೊರಬಿದ್ದಿದ್ದು, ಸಾಕಷ್ಟು ಸುದ್ದಿ ಮಾಡುತ್ತಿವೆ. ಸಿನಿಮಾದ ಹಾಡಿನ ಶೂಟಿಂಗ್ ಕೊಚ್ಚಿಯ ಆದ್ರಪಲ್ಲಿ ಬಳಿ ನಡೆಯುತ್ತಿದ್ದು, ಕಳೆದ 10 ದಿವಸಗಳಿಂದ ಸಾಹಸ ದೃಶ್ಯಗಳ ಜೊತೆ ಹಾಡಿನ ಚಿತ್ರೀಕರಣವೂ ನಡೆಯುತ್ತಿದೆ. ಸಾಹಸ ದೃಶ್ಯ ಶೂಟಿಂಗ್ ವೇಳೆ 50 ಕ್ಕೂ ಹೆಚ್ಚು ಸಾಹಸ ಕಲಾವಿದರುಗಳು ಪಾಲ್ಗೊಂಡಿದ್ದರು.
‘ಪಡ್ಡೆ ಹುಲಿ’ ನಂತರ ಶ್ರೇಯಸ್ ಅವರಿಗೆ ಇದು ಎರಡನೇ ಸಿನಿಮಾ. ಈ ಸಿನಿಮಾ ಧಾರವಾಡದ ಸಿಂಧು ಕತೆಯಾಧಾರಿತ ಸಿನಿಮಾವಾಗಿದ್ದು, ಚಿತ್ರಕ್ಕೆ, ಗೋಪಿ ಸುಂದರ್ ಸಂಗೀತ, ಡಾ ವಿ ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ, ರವಿ ಶ್ರೀವತ್ಸ ಚಿತ್ರಕಥೆ ಮತ್ತು ಸಂಭಾಷಣೆ, ಸುರೇಶ್ ಅರಸ್ ಸಂಕಲನ ಮಾಡುತ್ತಿದ್ದಾರೆ. ಇನ್ನು ಸಿನಿಮಾದಲ್ಲಿ ಪೋಷಕ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಚಿತ್ಕಲಾ, ಅಶ್ವಿನಿ ಗೌಡ, ಸುಚಿಂದ್ರ ಪ್ರಸಾದ್, ನವೀನ್ ಪಾಡೇಳ್ ಕಾಣಿಸಿಕೊಂಡಿದ್ದಾರೆ.