ಕರ್ನಾಟಕ

karnataka

ETV Bharat / sitara

ಶ್ರದ್ಧಾ ಶ್ರೀನಾಥ್ ಅಭಿನಯದ 'ಚಕ್ರ' ಇದೇ ತಿಂಗಳು ಬಿಡುಗಡೆ - Vishal Starring Chakra

ವಿಶಾಲ್, ಶ್ರದ್ಧಾ ಶ್ರೀನಾಥ್, ರೆಜಿನಾ ಕ್ಯಾಸಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಚಕ್ರ' ಸಿನಿಮಾ ಫೆಬ್ರವರಿ 19 ರಂದು ಬಿಡುಗಡೆಯಾಗುತ್ತಿದೆ. ಕನ್ನಡ ಹಾಗೂ ತಮಿಳು ಎರಡೂ ಭಾಷೆಗಳಲ್ಲೂ ಚಿತ್ರ ತೆರೆ ಕಾಣುತ್ತಿದೆ.

Chakra movie
'ಚಕ್ರ' ಚಿತ್ರದಲ್ಲಿ ಶ್ರದ್ಧಾ

By

Published : Feb 16, 2021, 10:01 AM IST

'ಯುಟರ್ನ್​' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ಶ್ರದ್ಧಾ ಶ್ರೀನಾಥ್​, ನಂತರ ಕನ್ನಡ ಸಿನಿಮಾಗಳೊಂದಿಗೆ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿನಟಿಸಿ ಅಲ್ಲಿನ ಪ್ರೇಕ್ಷಕರಿಗೂ ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ಶ್ರದ್ಧಾ ವಿಶಾಲ್ ಜೊತೆ ನಟಿಸಿರುವ 'ಚಕ್ರ' ಸಿನಿಮಾ ಬಿಡುಗಡೆಯಾಗಬೇಕಿದೆ.

ಇದನ್ನೂ ಓದಿ:ಮೆಚ್ಚಿನ ನಟಿಗೆ ಗುಡಿ ಕಟ್ಟಿ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು

ಇದೇ ತಿಂಗಳು 19 ರಂದು 'ಚಕ್ರ' ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಎಂ.ಎಸ್​. ಆನಂದನ್ ನಿರ್ದೇಶನದ ಈ ಸಿನಿಮಾವನ್ನು ವಿಶಾಲ್ ಫಿಲ್ಮ್​ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ವಿಶಾಲ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ವಿಶಾಲ್, ಶ್ರದ್ಧಾ ಶ್ರೀನಾಥ್ ಜೊತೆ ರೆಜಿನಾ ಕ್ಯಾಸಂದ್ರ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತೆಲುಗು ಹಾಗೂ ತಮಿಳು ಎರಡೂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರದ ಹಾಡುಗಳಿಗೆ ಯುವನ್ ಶಂಕರ್​​ರಾಜಾ ಸಂಗೀತ ನೀಡಿದ್ದಾರೆ. ಚಿತ್ರದ ಟೀಸರ್​​​ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಸಿನಿಪ್ರಿಯರು ಸಿನಿಮಾ ನೋಡಲು ಕಾಯುತ್ತಿದ್ದಾರೆ.

'ಚಕ್ರ' ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್, ವಿಶಾಲ್

ABOUT THE AUTHOR

...view details