ಕರ್ನಾಟಕ

karnataka

ETV Bharat / sitara

ಕನ್ನಡಕ್ಕೆ ಡಬ್​ ಆಗಿ ಪ್ರಸಾರವಾಗಲಿದೆ ಶ್ರದ್ಧಾ ಶ್ರೀನಾಥ್ ಅಭಿನಯದ ತೆಲುಗು ಚಿತ್ರ - Jersey movie dubbed to Kannada

ಕನ್ನಡತಿ ಶ್ರದ್ಧಾ ಶ್ರೀನಾಥ್ ಹಾಗೂ ನ್ಯಾಚುರಲ್ ಸ್ಟಾರ್ ನಾಣಿ ಅಭಿನಯದ 'ಜೆರ್ಸಿ' ತೆಲುಗು ಸಿನಿಮಾ ಕನ್ನಡಕ್ಕೆ ಡಬ್ ಆಗಿ ಆಗಸ್ಟ್ 23 ರಂದು ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.

Jersey movie
ಶ್ರದ್ಧಾ ಶ್ರೀನಾಥ್

By

Published : Aug 20, 2020, 5:48 PM IST

ತೆಲುಗಿನ ಸಾಲು ಸಾಲು ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಇದೀಗ ತೆಲುಗಿನ‌ ಮತ್ತೊಂದು ಸೂಪರ್ ಹಿಟ್ ಸಿನಿಮಾ ಕನ್ನಡಕ್ಕೆ ಡಬ್ ಆಗುತ್ತಿದ್ದು ಇದೇ 23 ರಂದು ಸಂಜೆ 6 ಗಂಟೆಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಶ್ರದ್ಧಾ ಶ್ರೀನಾಥ್ ಹಾಗೂ ನಾಣಿ ನಟಿಸಿರುವ ತೆಲುಗಿನ ಹಿಟ್ ಸಿನಿಮಾ 'ಜೆರ್ಸಿ' ಕನ್ನಡಕ್ಕೆ 'ಜರ್ಸಿ' ಆಗಿ ಡಬ್ ಆಗಿದೆ. ಈಗಾಗಲೇ ಈ ಚಿತ್ರದ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಿನಿಪ್ರಿಯರು ಈ ಚಿತ್ರವನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.

'ಜರ್ಸಿ'

ನಾಯಕ ಅರ್ಜುನ್ ಒಬ್ಬ ಪ್ರತಿಭಾವಂತನಾಗಿರುತ್ತಾನೆ. ಕ್ರಿಕೆಟ್ ಎಂದರೆ ಬಹಳ ಇಷ್ಟಪಡುವ ಆತ ಆಟದಲ್ಲಿ ವಿಫಲನಾಗಿರುತ್ತಾನೆ. ಸುಮಾರು 30 ವರ್ಷಗಳ ಕಾಲ ಕ್ರಿಕೆಟ್​​​​ನಿಂದ ದೂರ ಉಳಿಯುವ ಆತ ಮತ್ತೆ ಕ್ರಿಕೆಟ್ ಆಡಲು ಆರಂಭಿಸುತ್ತಾನೆ. ಅದರಲ್ಲಿ ಆತ ಯಶಸ್ವಿಯಾಗುತ್ತಾನಾ ಎಂಬುದೇ ಚಿತ್ರದ ಕಥೆ. ಗೌತಮ್ ತಿನ್ನನೂರಿ‌ ನಿರ್ದೇಶನದ 'ಜೆರ್ಸಿ' ಸಿನಿಮಾ 2019ರಲ್ಲಿ ಬಿಡುಗಡೆಯಾಗಿದ್ದು ಆ ವರ್ಷದ ಸೂಪರ್ ಹಿಟ್ ಸಿನಿಮಾಗಳ ಸಾಲಿಗೆ ಸೇರಿತ್ತು. ನಾಣಿ , ಶ್ರದ್ದಾ ಶ್ರೀನಾಥ್ , ಹರೀಶ್ ಕಲ್ಯಾಣ್, ಸನುಷಾ , ಸಂಪತ್ ರಾಜ್ , ಸತ್ಯರಾಜ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

ABOUT THE AUTHOR

...view details