ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶಿಸುತ್ತಿರುವ 'ರುಸ್ತುಂ' ಸಿನಿಮಾ ಶೂಟಿಂಗ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ನಿನ್ನೆ ತಾನೇ ಶಿವರಾಜ್ ಕುಮಾರ್ ಹಾಗೂ ಶ್ರದ್ಧಾ ಶ್ರೀನಾಥ್ ಇಬ್ಬರೂ ಹಾಡೊಂದಕ್ಕೆ ಹೆಜ್ಜೆ ಹಾಕಿರುವ ದೃಶ್ಯವನ್ನು ಚಿತ್ರೀಕರಿಸಲಾಗಿದೆ.
ಇನ್ನು ಶ್ರದ್ಧಾ ಶ್ರೀನಾಥ್ ತಾವು ಶಿವಣ್ಣ ಅವರೊಂದಿಗೆ ಹೆಜ್ಜೆ ಹಾಕಿದ ಅನುಭವವನ್ನು ಈಟಿವಿ ಭಾರತ್ ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ. ಶಿವಣ್ಣ ಅವರೊಂದಿಗೆ ಡ್ಯಾನ್ಸ್ ಮಾಡಿದ್ದೇನೆ ಎಂದರೆ ನಂಬಲು ಆಗುತ್ತಿಲ್ಲ. ಅವರು ಇನ್ನೂ ಯುವಕರನ್ನೂ ನಾಚಿಸುವಂತೆ ಹೆಜ್ಜೆ ಹಾಕುತ್ತಾರೆ. ನಾನಂತೂ ಅವರೊಂದಿಗೆ ಡ್ಯಾನ್ಸ್ ಮಾಡಿ ಬಹಳ ಥ್ರಿಲ್ ಆಗಿದ್ದೇನೆ. ಅವರೊಂದಿಗೆ ನಟಿಸಲು ಅವಕಾಶ ಸಿಕ್ಕಿದ್ದೇ ನನ್ನ ಅದೃಷ್ಟ ಎಂದು ಶ್ರದ್ಧಾ ಹೇಳಿದ್ದಾರೆ.