ಕರ್ನಾಟಕ

karnataka

ETV Bharat / sitara

ಶ್ರದ್ಧಾ ಈಗ ಪೊಲೀಸ್ ಅಧಿಕಾರಿ: ಆ್ಯಕ್ಷನ್​​​​ಗೆ ರೆಡಿಯಾಗುತ್ತಿದ್ದಾರೆ ಯುಟರ್ನ್ ಬೆಡಗಿ - undefined

ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗದಲ್ಲಿ ಕರಿಯರ್ ಆರಂಭಿಸಿದರೂ ಪವನ್ ಕುಮಾರ್ ನಿರ್ದೇಶನದ 'ಯುಟರ್ನ್' ಸಿನಿಮಾ ಮೂಲಕ ಬೆಳಕಿಗೆ ಬಂದ ಶ್ರದ್ಧಾ ಶ್ರೀನಾಥ್ ಈಗ ತಮಿಳು, ತೆಲುಗಿನಲ್ಲೂ ಬೇಡಿಕೆಯ ನಟಿ. ಅವರೀಗ ಪೊಲೀಸ್​ ಅಧಿಕಾರಿಯಾಗಲು ರೆಡಿಯಾಗ್ತಿದ್ದಾರೆ.

ಶ್ರದ್ಧಾ

By

Published : May 14, 2019, 11:53 AM IST

ಶ್ರದ್ಧಾ ಶ್ರೀನಾಥ್ ಕಾಲಿವುಡ್​​, ಟಾಲಿವುಡ್​​, ಬಾಲಿವುಡ್​​ ಎಂದೆಲ್ಲಾ ಮುಂಬೈ, ಚೆನ್ನೈ, ಹೈದರಾಬಾದ್, ಬೆಂಗಳೂರು ಸುತ್ತುತ್ತಲೇ ಇದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ನಾಣಿ ಜೊತೆ ಅಭಿನಯಿಸಿದ ತೆಲುಗಿನ 'ಜೆರ್ಸಿ' ಹಿಟ್ ಆಗಿದ್ದೇ ತಡ, ಶ್ರದ್ಧಾಗೆ ಮತ್ತಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

ತಮಿಳಿನ ಕಾಟ್ರು ವೆಳೆಯಿಡೈ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದ ಶ್ರದ್ಧಾ, ಇವನ್ ತಂತಿರನ್​ನಲ್ಲೂ ಕೂಡಾ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ಕನ್ನಡದ ಉಳಿದವರು ಕಂಡಂತೆ ಚಿತ್ರದ ತಮಿಳು ರಿಮೇಕ್ 'ರಿಚಿ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಅಲ್ಲೂ ಗುರುತಿಸಿಕೊಂಡರು.

ಇತ್ತೀಚೆಗಷ್ಟೇ ಬಿಡುಗಡೆಯಾದ K-13 ಸಕ್ಸಸ್ ಕಂಡಿದ್ದು ಹೆಚ್​​, ವಿನುತ್ ನಿರ್ದೇಶನಲ್ಲಿ ನೇರ್​ಕೊಂಡ ಪಾರ್ವೈ ಸಿನಿಮಾದಲ್ಲಿ ಅಜಿತ್​​​ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಶ್ರದ್ಧಾ. ಇದು ಬಾಲಿವುಡ್​​​ ಪಿಂಕ್ ಸಿನಿಮಾ ರಿಮೇಕ್​​ ಆಗಿದ್ದು, ಆಗಸ್ಟ್​ 10 ರಂದು ಬಿಡುಗಡೆಯಾಗಲಿದೆ.

ಈ ಸಿನಿಮಾಗಳ ಜೊತೆಜೊತೆಗೆ ಶ್ರದ್ಧಾ ಮತ್ತೊಂದು ಚಿತ್ರದಲ್ಲಿ ನಟಿಸಲು ಆಯ್ಕೆಯಾಗಿದ್ದಾರೆ. ಆನಂದ್ ಎಂಬ ಹೊಸ ನಿರ್ದೇಶಕ ಆ್ಯಕ್ಷನ್ ಕಟ್ ಹೇಳುತ್ತಿರುವ 'ಇರುಂಬುತಿರೈ-2' ಸಿನಿಮಾದಲ್ಲಿ ಶ್ರದ್ಧಾ ನಟಿಸುತ್ತಿದ್ದಾರೆ. ತಮ್ಮ ಕರಿಯರ್​​​​ನಲ್ಲೇ ಮೊದಲ ಬಾರಿಗೆ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದು, ಆ್ಯಕ್ಷನ್​​ಗಾಗಿ ಶ್ರದ್ಧಾ ತಯಾರಿ ನಡೆಸಿದ್ದಾರೆ. ವಿಶಾಲ್ ಕೂಡಾ ಎರಡನೇ ಭಾಗದಲ್ಲೂ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸುತ್ತಿದ್ದಾರೆ. ಯುವನ್ ಶಂಕರ್ ರಾಜಾ ಈ ಸಿನಿಮಾ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details