ಕರ್ನಾಟಕ

karnataka

ETV Bharat / sitara

3 ತಿಂಗಳ ಬಳಿಕ ಗರಿಗೆದರಿದ ಚಂದನವನ: ಸೈಲೆಂಟ್ ಆಗಿ ಶೂಟಿಂಗ್ ಶುರು ಮಾಡಿದ ಕಿಚ್ಚ‌ನ 'ಫ್ಯಾಂಟಮ್' - cenema shooting after lockdown news

ಲಾಕ್​ಡೌನ್​ ಆದಾಗಿನಿಂದ ಬಂದ್​​ ಆಗಿದ್ದ ಚಿತ್ರರಂಗದ ಚಟುವಟಿಕೆಗಳು ಇದೀಗ ಗರಿಗೆದರಿವೆ. ಸತತ 3 ತಿಂಗಳ ಬಳಿಕ ನಟರು ಶೂಟಿಂಗ್​​ನಲ್ಲಿ ಭಾಗವಹಿಸಲು ಅಣಿಯಾಗುತ್ತಿದ್ದಾರೆ. ಕಿಚ್ಚ ಸುದೀಪ್ ಅಭಿನಯದ "ಫ್ಯಾಂಟಮ್", ಶ್ರೀಮುರುಳಿ ಅಭಿನಯದ ಮದಗಜ, ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​​-2 ಸಿನಿಮಾಗಳ ಶೂಟಿಂಗ್​ ಆರಂಭಿಸಲು ಈಗಾಗಲೇ ಚಿತ್ರತಂಡಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ.

shooting
ಶೂಟಿಂಗ್ ಶುರು ಮಾಡಿದ ಸಿನಿಮಾಗಳು

By

Published : Jun 23, 2020, 3:11 PM IST

ಬೆಂಗಳೂರು: ಕಿಲ್ಲರ್ ಕೊರೊನಾ ಹಾವಳಿ ನಡುವೆಯೂ ಚಂದನವನ ಮತ್ತೆ ಚೇತರಿಕೆಯತ್ತ ಮುಖ ಮಾಡ್ತಿದೆ. ಸತತ ಮೂರು ತಿಂಗಳ ಬಿಗ್ ಬ್ರೇಕ್ ನಂತರ ಮತ್ತೆ ಚಿತ್ರರಂಗದ ಚಟುವಟಿಕೆಗಳು ನಿಧಾನವಾಗಿ ಶುರುವಾಗ್ತಿದೆ.

ಸರ್ಕಾರ ಕೆಲವೊಂದು ನಿರ್ಬಂಧ ವಿಧಿಸಿ ಶೂಟಿಂಗ್​​ಗೆ ಅನುಮತಿ ನೀಡಿದ ಬೆನ್ನಲ್ಲೆ, ಸರ್ಕಾರ ಆದೇಶ ಅನುಸರಿಸಿ ಶೂಟಿಂಗ್​​ನಲ್ಲಿ ಭಾಗಿಯಾಗಲು ಸ್ಯಾಂಡಲ್ ವುಡ್ ಸ್ಟಾರ್​​​ಗಳು ರೆಡಿಯಾಗಿದ್ದಾರೆ. ಮೂರು ತಿಂಗಳ ಬಳಿಕ ಕಿಚ್ಚ ಸುದೀಪ್ ಅಭಿನಯದ "ಫ್ಯಾಂಟಮ್" ಚಿತ್ರತಂಡ ಸಿಹಿ ಸುದ್ದಿ ನೀಡಿದ್ದು, ಲಾಕ್​​ಡೌನ್ ನಂತರ ಫ್ಯಾಂಟಮ್ ಚಿತ್ರದ ಶೂಟಿಂಗ್ ಶುರುವಾಗಿದೆ. ನಿನ್ನೆಯಿಂದ ಹೈದರಾಬಾದ್ ಅನ್ನಪೂರ್ಣ ಸ್ಟುಡಿಯೋದಲ್ಲಿ ಫ್ಯಾಂಟಮ್ ಚಿತ್ರದ ಶೂಟಿಂಗ್ ಶುರುವಾಗಿದೆ. ಚಿತ್ರೀಕರಣ ಸ್ಥಳದಲ್ಲಿ ಕೊರೊನಾ ಬಗ್ಗೆ ಜಾಗೃತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಶೂಟಿಂಗ್ ಶುರು ಮಾಡಿದ ಸಿನಿಮಾಗಳು

ಶೂಟಿಂಗ್​​​ನಲ್ಲಿ ಭಾಗಿಯಾಗಿರೋ ಪ್ರತಿಯೊಬ್ಬರಿಗೂ ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಿ ಹಾಗೂ ಬಾಡಿ ಟೆಂಪ್ರೇಚರ್ ಚೆಕ್ ಮಾಡಿ ಯಾವುದೇ ಸಮಸ್ಯೆ ಇಲ್ಲದವರು ಶೂಟಿಂಗ್​​ನಲ್ಲಿ ಭಾಗಿಯಾಗುವುದಕ್ಕೆ ಅವಕಾಶ ನೀಡಿದ್ದಾರೆ. ಇನ್ನು ಫ್ಯಾಂಟಮ್ ಚಿತ್ರದ ಶೂಟಿಂಗ್​​ಗೆ ಕಿಚ್ಚ ಸುದೀಪ್ ಜುಲೈ1ರಿಂದ ಹಾಜರಾಗಲಿದ್ದಾರೆ ಎಂದು ನಿರ್ದೆಶಕ ಅನೂಪ್ ಭಂಡಾರಿ ತಿಳಿಸಿದ್ದಾರೆ.

ಇದರ ಜೊತೆಗೆ ಜುಲೈ 13 ರಿಂದ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿಯದ 'ಮದಗಜ' ಚಿತ್ರದ ಶೂಟಿಂಗ್ ಸಹ ಆರಂಭವಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಹಾಗೂ ಜುಲೈ 1ರಿಂದ ಕೆಜಿಎಫ್-2 ಶೂಟಿಂಗ್ ಶುರುವಾಗಲಿದ್ದು, ಜುಲೈ 1ರಿಂದ ಯಶ್ ಶೂಟಿಂಗ್​​ನಲ್ಲಿ ಭಾಗಿಯಾಗಲಿದ್ದು ,ಚಿತ್ರೀಕರಣಕ್ಕಾಗಿ ಚಿತ್ರತಂಡ ಸೆಟ್ ಹಾಕುವುದರಲ್ಲಿ ಬ್ಯುಸಿಯಾಗಿದೆ.

ಒಟ್ಟಿನಲ್ಲಿ ಬರೋಬ್ಬರಿ ಮೂರು ತಿಂಗಳ ಬಳಿಕ ಸ್ಯಾಂಡಲ್​​ವುಡ್ ಸ್ಟಾರ್ ನಟರು ಶೂಟಿಂಗ್​​​ನಲ್ಲಿ ಸಕ್ರಿಯವಾಗಲಿದ್ದು, ಸರ್ಕಾರದ ನಿಯಮಗಳ ಮಧ್ಯೆಯೇ ಶೂಟಿಂಗ್ ನಲ್ಲಿ ಭಾಗಿಯಾಗಲೂ ಸಿದ್ಧರಾಗಿದ್ದಾರೆ.

ABOUT THE AUTHOR

...view details