ಕೊನೆ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಮಾತನ್ನು ಆಗ್ಗಾಗ್ಗೆ ನಾವು ಕೇಳುತ್ತಿರುತ್ತೇವೆ. ಇದೀಗ ಸ್ಯಾಂಡಲ್ವುಡ್ನಲ್ಲಿ ತಂಡವೊಂದು 'ಕಟ್ಟ ಕಡೆಯ ನಿಮಿಷ' ಎಂಬ ಟೈಟಲ್ ಇಟ್ಟುಕೊಂಡು ನೈಜ ಕಥೆ ಆಧರಿತ ಸಿನಿಮಾವೊಂದನ್ನು ತಯಾರಿಸಿದೆ.
'ಕಟ್ಟ ಕಡೆಯ ನಿಮಿಷ' ಚಿತ್ರಕ್ಕೆ ಇದಕ್ಕೂ ಮುನ್ನ ಭೂತ್ ಎಂದು ಹೆಸರಿಡಲಾಗಿತ್ತು. ಆದರೆ ನಂತರ ಹೆಸರು ಬದಲಿಸಲಾಗಿದೆ. ಚಿತ್ರ ಹಾರರ್, ಥ್ರಿಲ್ಲರ್ ಅಂಶವನ್ನೊಂದಿದೆ ಎನ್ನುತ್ತಾರೆ ನಿರ್ದೇಶಕ ಜಗನ್ ಅಲೋಶಿಯಸ್. ಕನ್ನಡದ 6-5=2 ಚಿತ್ರವನ್ನು ತಮಿಳಿನಲ್ಲಿ 'ಕಾದಲ್ ಕನ್ ಕಟ್ಟದೆ' ಎಂಬ ಹೆಸರಿನಲ್ಲಿ ರೀಮೇಕ್ ಮಾಡಲಾಗಿತ್ತು. ಈ ಚಿತ್ರದಲ್ಲಿ ಜಗನ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಕನ್ನಡದ ಮೊಟ್ಟ ಮೊದಲ ಕ್ರೌಡ್ ಫಂಡಿಂಗ್ ಸಿನಿಮಾ 'ಲೂಸಿಯಾ' ಪ್ರೇರಣಿಯಿಂದ 'ಕಡೆ ಕಡೆಯ ನಿಮಿಷ' ಚಿತ್ರವನ್ನು ಮಾಡಲಾಗುತ್ತಿದೆ. ಈ ಬಗ್ಗೆ ಜಗನ್ ಈಗಾಗಲೇ ವಿವರಣೆ ಕೂಡಾ ನೀಡಿದ್ದಾರೆ.