ಹೈದರಾಬಾದ್: ಬಾಲಿವುಡ್ ಐಕಾನ್ ಅಮಿತಾಬ್ ಬಚ್ಚನ್ ಮತ್ತು ಸೂಪರ್ ಸ್ಟಾರ್ ದೀಪಿಕಾ ಪಡುಕೋಣೆ ಅವರೊಂದಿಗೆ ತೆಲುಗು ಸೂಪರ್ ಸ್ಟಾರ್ ಪ್ರಭಾಸ್ ಅಭಿನಯಿಸುತ್ತಿರುವ ಮುಂದಿನ ಚಿತ್ರಕ್ಕೆ ಇಂದು ಮೂಹರ್ತ ನೆರವೇರಿಸಲಾಯಿತು.
ಈ ಸಿನಿಮಾವನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ಹಾಗೂ ಮಹಾನಟಿ ನಿರ್ದೇಶಿಸಿದ್ದ ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಪೌರಾಣಿಕ ಹಾಗೂ ಫ್ಯಾಂಟಸಿ ಕತೆಯನ್ನು ಒಳಗೊಂಡಿರಲಿದೆ. ಬಾಲಿವುಡ್ನ ಇಬ್ಬರು ತಾರೆಯರೊಂದಿಗೆ ಪ್ರಭಾಸ್ ಇದೇ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಇಂದು ಅಧಿಕೃತವಾಗಿ ಪ್ರಭಾಸ್ ಸಿನಿಮಾಕ್ಕೆ ಕ್ಲಾಪ್ ಮಾಡಿದರು. ಈ ಮೂಲಕ ಸಿನಿಮಾದ ಚಿತ್ರೀಕರಣ ಆರಂಭಗೊಂಡಿದೆ. ಈ ಕುರಿತಂತೆ ವೈಜಂಯತಿ ಪ್ರೋಡಕ್ಷನ್ ತಮ್ಮ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಇಬ್ಬರು ಬಾಲಿವುಡ್ ತಾರೆಯರು ಈ ಹಿಂದೆ ಆರಕ್ಷನ್ ಮತ್ತು ಪಿಕು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ಪ್ರಾಜೆಕ್ಟ್ ಕೆ ಎಂದು ಹೆಸರಿಡಲಾಗಿದೆ.
ಅಮಿತಾಬ್ ಬಚ್ಚನ್‌ಗೆ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿರುವುದು ಇದೆ ಮೊದಲಲ್ಲ. ಮುಂಚೆ ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ, ನಾಗಾರ್ಜುನ ನಟನೆಯ ಮನಂ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಬಚ್ಚನ್ ಕಾಣಿಸಿಕೊಂಡಿದ್ದಾರೆ. ಆದರೆ, ದೀಪಿಕಾ ಪಡುಕೋಣೆಗೆ ಇದು ಮೊದಲ ತೆಲುಗು ಸಿನಿಮಾ ಆಗಲಿದೆ. ಈ ಮೊದಲು ಅವರು ದಕ್ಷಿಣ ಭಾರತದ ಕನ್ನಡ ಹಾಗೂ ತಮಿಳು ಸಿನಿಮಾಗಳಲ್ಲಿ ಮಾತ್ರವೇ ನಟಿಸಿದ್ದಾರೆ.
ಓದಿ: ರಣಬೀರ್ ಅಭಿನಯದ ‘ಶಂಶೇರಾ’ ಬಗ್ಗೆ ನಿರ್ಮಾಪಕ ಕರಣ್ ಮಲ್ಹೋತ್ರಾ ಪೋಸ್ಟ್
ವೈಜಯಂತಿ ಮೂವೀಸ್ ಬ್ಯಾನರ್ ಅಡಿ ಈ ಬಹುಭಾಷಾ ಚಿತ್ರ ನಿರ್ಮಾಣವಾಗುತ್ತಿದೆ. ಇದು ದಕ್ಷಿಣ ಭಾರತದಲ್ಲೇ ಹೆಚ್ಚಿನ ಪ್ರಖ್ಯಾತಿ ಪಡೆದಿರುವ ನಿರ್ಮಾಣ ಸಂಸ್ಥೆಯಾಗಿದೆ. ಇದು ಮಹಾನಟಿ, ಅಗ್ನಿ ಪಾರ್ವತಮ್ ಮತ್ತು ಇಂದ್ರನಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿ ಖ್ಯಾತಿ ಪಡೆದಿದೆ.