ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡ್ತಿದೆ ಶೋಕಿವಾಲ ಚಿತ್ರ. ಲವ್ ಯು ರಚ್ಚು ಸಿನಿಮಾ ಬಳಿಕ ಅಜಯ್ ರಾವ್ ಅಭಿನಯಿಸಿರುವ ಬಹು ನಿರೀಕ್ಷಿತ ಚಿತ್ರ ಇದಾಗಿದ್ದು, ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೆಟ್ ಪಡೆದಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಶೋಕಿವಾಲ ಬಿಡುಗಡೆಗೆ ಸಜ್ಜಾಗಿದೆ.
ಶೋಕಿವಾಲ ಪಕ್ಕಾ ಹಳ್ಳಿ ಸೊಗಡಿನ ಚಿತ್ರವಾಗಿದ್ದು, ಅಜಯ್ ರಾವ್ಗೆ ಸಲಗ ಸಿನಿಮಾ ಖ್ಯಾತಿಯ ಸಂಜನಾ ಆನಂದ್ ಜೋಡಿಯಾಗಿದ್ದಾರೆ. ಇನ್ನು ಶರತ್ ಲೋಹಿತಾಶ್ವ, ಗಿರಿ, ತಬಲಾ ನಾಣಿ , ಮುನಿರಾಜ್, ಅರುಣ ಬಾಲರಾಜ್, ವಾಣಿ, ಚಂದನ, ಲಾಸ್ಯ, ನಾಗರಾಜಮೂರ್ತಿ ಸೇರಿ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಚನ್ನಪಟ್ಟಣ, ಶ್ರೀರಂಗಪಟ್ಟಣ, ಮಂಡ್ಯ, ಮೈಸೂರು, ತುಮಕೂರು, ಮಾಗಡಿಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಂಗೀತ ನಿರ್ದೇಶಕ ಶ್ರೀಧರ್, ವಿ. ಸಂಭ್ರಮ್ ಅವರ ಸಂಗೀತವಿದ್ದು, 4 ಹಾಡುಗಳು ಬಹಳ ಚೆನ್ನಾಗಿ ಮೂಡಿಬಂದಿದೆ. ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ಅವರ ಸಾಹಿತ್ಯವಿದೆ. ನವೀನ್ ಕುಮಾರ್ ಎಸ್ ಅವರ ಛಾಯಾಗ್ರಹಣವಿದ್ದರೆ, ಕೆ.ಎಂ. ಪ್ರಕಾಶ್ ಎಡಿಟರ್ ಆಗಿದ್ದು, ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರಕ್ಕೆ ಮೋಹನ್ ನೃತ್ಯ ಸಂಯೋಜನೆ, ವಿಕ್ರಮ್ ಮೋರ್ ಸಾಹಸ, ಮೈಸೂರು ರಘು ಅವರ ಕಲಾ ನಿರ್ದೇಶನವಿದೆ. ಟಿ.ಆರ್ ಚಂದ್ರಶೇಖರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಜಾಕಿ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ:ಗರುಡ ಗಮನ ವೃಷಭ ವಾಹನ ಸಿನಿಮಾ ಮೆಚ್ಚಿ, ಹಾಡಿ ಹೊಗಳಿದ ತೆಲುಗು ಡೈರೆಕ್ಟರ್
ಸದ್ಯ ಸೆನ್ಸಾರ್ನಲ್ಲಿ ಪಾಸಾಗಿರೋ ಶೋಕಿವಾಲ ಚಿತ್ರವನ್ನು ಸಿನಿಮಾ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅನುಮತಿ ಸಿಕ್ಕ ಮೇಲೆ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.