ಕರ್ನಾಟಕ

karnataka

ETV Bharat / sitara

ಸಿಸಿಬಿಯಿಂದ ನೋಟಿಸ್​ ಹಿನ್ನೆಲೆ.. ನಾಳೆ ಬೆಳಗ್ಗೆ 10 ಗಂಟೆಗೆ ಆರ್ಯನ್ ಸಂತೋಷ್​ ವಿಚಾರಣೆಗೆ ಹಾಜರು - ಸಿಸಿಬಿ ಪೊಲೀಸ್​​

ಈಗ ಬೆಂಗಳೂರಿನ ಸದಾಶಿವನಗರದಲ್ಲಿರೋ ಅವರ ಆನಂದ್ ಅಪಾರ್ಟ್‌ಮೆಂಟ್​​ನಲ್ಲಿ ಯಾರೂ ಇಲ್ಲ ಅನ್ನೋದು ತಿಳಿದು ಬಂದಿದೆ..

Shock to Akul Balaji
ಅಕುಲ್​​ ಬಾಲಾಜಿ, ಆರ್ಯನ್ ಸಂತೋಷ್​​ಗೆ ಶಾಕ್​ : ಸಿಸಿಬಿಯಿಂದ ನೊಟೀಸ್​​

By

Published : Sep 18, 2020, 7:23 PM IST

ಕನ್ನಡ ಚಿತ್ರರಂಗದಲ್ಲಿನ ಡ್ರಗ್ಸ್ ಜಾಲ ದಿನೇದಿನೆ ಒಬೊಬ್ಬ ನಟ, ನಟಿಯರನ್ನ ಸುತ್ತಿಕೊಳ್ಳುತ್ತಿದೆ. ರಾಗಿಣಿ, ಸಂಜನಾ ಗಲ್ರಾನಿ ಬಳಿಕ ಈಗ ಸ್ಯಾಂಡಲ್‌ವುಡ್​​ನಲ್ಲಿ ಒಂದೊಂದೇ ಹೆಸರು ಬಹಿರಂಗ ಆಗುತ್ತಿವೆ. ಇದೀಗ ನಟ, ನಿರೂಪಕ ಅಕುಲ್ ಬಾಲಜಿ ಮತ್ತು ನಟ ಆರ್ಯನ್ ಸಂತೋಷ್​ಗೆ ಸಿಸಿಬಿ ನೋಟಿಸ್‌ ನಿದ್ದೆ ಕೆಡಿಸಿದೆ.

ಆಗಾಗ ವೀಕೆಂಡ್ ಪಾರ್ಟಿಗಳಲ್ಲಿ ಅಕುಲ್ ಬಾಲಾಜಿ ಮತ್ತು ಆರ್ಯನ್ ಸಂತೋಷ್ ಭಾಗಯಾಗುತ್ತಿದ್ರು. ಈ ಹಿನ್ನೆಲೆ ಸಿಸಿಬಿ ಅಧಿಕಾರಿಗಳು ಇಂದು ಇವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಕುಟುಂಬದ ಜೊತೆ ಮೈಸೂರಿನಲ್ಲಿ ಪಿತೃ ಪಕ್ಷ ಹಬ್ಬವನ್ನ ಆಚರಿಸುತ್ತಿದ್ದಾರೆ ಸಂತೋಷ ಆರ್ಯನ್. ಈಗ ಬೆಂಗಳೂರಿನ ಸದಾಶಿವನಗರದಲ್ಲಿರೋ ಅವರ ಆನಂದ್ ಅಪಾರ್ಟ್‌ಮೆಂಟ್​​ನಲ್ಲಿ ಯಾರೂ ಇಲ್ಲ ಅನ್ನೋದು ತಿಳಿದು ಬಂದಿದೆ.

ಆರ್ಯನ್ ಸಂತೋಷ್​​ ಮತ್ತು ಸ್ನೇಹಿತರು

ಸದ್ಯ ಸಿಸಿಬಿ ನೋಟಿಸ್ ನೀಡಿರುವ ಹಿನ್ನೆಲೆ ಇಂದು ರಾತ್ರಿ ಮೈಸೂರಿನಿಂದ ಬೆಂಗಳೂರಿಗೆ ಬಂದು ನಾಳೆ ಬೆಳಗ್ಗೆ 10 ಗಂಟೆಗೆ ಸಿಸಿಬಿ ಅಧಿಕಾರಗಳ‌ ವಿಚಾರಣೆಗೆ ಹಾಜರಾಗುತ್ತೇನೆ ಅಂತಾ ಸಂತೋಷ್ ಆರ್ಯನ್ ತಿಳಿಸಿದ್ದಾರೆ. ಆದರೆ, ಸಿಸಿಬಿ ಅಧಿಕಾರಿಗಳ ನೋಟಿಸ್‌ನಿಂದ ಸಂತೋಷ್ ಆರ್ಯನ್‌ ಕೂಡ ಟೆನ್ಷನ್‌ ಆಗಿರೋದಂತು ನಿಜ.

ABOUT THE AUTHOR

...view details