ಬೆಂಗಳೂರು : ಕನ್ನಡ ರಾಜ್ಯೋತ್ಸವ ಅಂಗವಾಗಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಡಾ.ರಾಜ್ ಕುಮಾರ್ ಅವರ ಮೇಯರ್ ಮುತ್ತಣ್ಣ ಪಾತ್ರದ ಪುತ್ಥಳಿಯನ್ನು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅನಾವರಣಗೊಳಿಸಿದರು. ಈ ವೇಳೆ ಆಯುಕ್ತರಾದ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಅಧಿಕಾರಿ ನೌಕರ ಸಂಘದ ಮುಖಂಡರು ಭಾಗಿಯಾಗಿದ್ದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಣ್ಣಾವ್ರ ಪುತ್ಥಳಿ ಅನಾವರಣ.. 'ಮೇಯರ್ ಮುತ್ತಣ್ಣ' ಯುವಕರಿಗೆ ಸ್ಫೂರ್ತಿ ಅಂದ್ರು ಶಿವಣ್ಣ.. - ಶಿವರಾಜ್ಕುಮಾರ್ ಸುದ್ದಿ
ಅಪ್ಪಾಜಿ ಹಾಕಿದ ದಾರಿಯಲ್ಲೇ ನಾವು ನಡೆಯುತ್ತಿದ್ದೇವೆ. ಅಪ್ಪಾಜಿಯಷ್ಟು ಲೆವೆಲ್ ಇಲ್ಲದೇ ಹೋದ್ರು ಅವರ ಶೇಕಡಾ ಇಪ್ಪತ್ತರಷ್ಟಾದ್ರು ಬರಲಿ, ಜನರ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಾಗಲ್ಲ..
ಅಣ್ಣಾವ್ರ ಪುತ್ತಳಿ ಅನಾವರಣ ಮಾಡಿದ ಶಿವರಾಜ್ ಕುಮಾರ್
ಈ ವೇಳೆ ಮಾತನಾಡಿದ ಶಿವಣ್ಣ, ಅಪ್ಪಾಜಿ ಮೇಯರ್ ಮುತ್ತಣ್ಣ ಸಿನಿಮಾ ಮಾಡಿದ ಬಳಿಕ ಸಾಕಷ್ಟು ಯುವಜನರಿಗೆ ಸ್ಫೂರ್ತಿ ಆಯ್ತು. ಆ ಗೌರವ ನಮಗೆ ಸಿಗ್ತಿರುವುದು ನಮ್ಮ ಪುಣ್ಯ ಎಂದರು. ಅಪ್ಪಾಜಿ ಹಾಕಿದ ದಾರಿಯಲ್ಲೇ ನಾವು ನಡೆಯುತ್ತಿದ್ದೇವೆ. ಅಪ್ಪಾಜಿಯಷ್ಟು ಲೆವೆಲ್ ಇಲ್ಲದೇ ಹೋದ್ರು ಅವರ ಶೇಕಡಾ ಇಪ್ಪತ್ತರಷ್ಟಾದ್ರು ಬರಲಿ, ಜನರ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಾಗಲ್ಲ ಎಂದರು.